facile ಹ್ಯಾಸೈಲ್‍
ಗುಣವಾಚಕ
  1. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಸುಲಭ ಸಾಧ್ಯ; ಸುರಳಿತ; ಸುಲಭವಾಗಿ ಮಾಡಬಲ್ಲ ಯಾ ಪಡೆಯಬಲ್ಲ: a facile victory ಸುಲಭವಾಗಿ ಗಳಿಸಿದ ಜಯ.
  2. (ಕೆಲಸ, ವಿಧಾನ, ಮೊದಲಾದವುಗಳ ವಿಷಯದಲ್ಲಿ) ಸರಾಗವಾದ; ಸುಲಭವಾದ; ಸರಾಗವಾಗಿ ಕೆಲಸ ಮಾಡುವ.
  3. ಸಿದ್ಧವಾಗಿರುವ; ತಡೆಯಿಲ್ಲದ; ನಿರರ್ಗಳ; ತಡೆಬಡೆಯಿಲ್ಲದ; ಪ್ರವಾಹರೂಪದ; ಧಾರಾಕಾರವಾದ.
  4. (ಪ್ರಾಚೀನ ಪ್ರಯೋಗ) (ವ್ಯಕ್ತಿ ನಡತೆಗಳ ವಿಷಯದಲ್ಲಿ) ಶಾಂತಮನಸ್ಸಿನ; ಸೌಮ್ಯ ಮನಸ್ಸಿನ; ಸೌಮ್ಯ ಸ್ವಭಾವದ; ಮೃದುವಾದ.
  5. (ಸ್ವಭಾವ ಮೊದಲಾದವುಗಳ ವಿಷಯದಲ್ಲಿ) ವಿನೇಯ; ಅನುನೇಯ; ಸುಲಭವಾಗಿ ತಿರುಗಿಸಬಲ್ಲ.
  6. (ಮಾತಿನ ಯಾ ಬರವಣಿಗೆಯ ವಿಷಯದಲ್ಲಿ) ಸರಾಗವಾದ; ಸುಗಮವಾದ; ಸುಲಭವಾದ ಆದರೆ ಗುಣಮಟ್ಟಕ್ಕೆ ಅಷ್ಟಾಗಿ ಗಮನಕೊಡದ: a facile pen ಸುಗಮವಾದ ಲೇಖನಿ, ಬರವಣಿಗೆ.