See also 2face
1face ಹೇಸ್‍
ನಾಮವಾಚಕ
  1. ಮುಖ; ಮೋರೆ; ಮೊಗ.
  2. ಮುಖ; ಮುಖಭಾವ; ಮುಖಭಂಗಿ; ಮುಖಮುದ್ರೆ; ಮುಖಲಕ್ಷಣ.
  3. ಮುಖವಿಕಾರ; ಮುಖಚೇಷ್ಟೆ; ಅಣಕ; ಅಣಕಿಸುವ ಮುಖ.
  4. ಧೈರ್ಯ; ಧೃಷ್ಟತೆ; ಧಾರ್ಷ; ನಿರ್ಲಜ್ಜತೆ; ಸಂಕೋಚ ಭಯಗಳೇ ಇಲ್ಲದಿರುವಿಕೆ.
  5. ಹೊರತೋರ್ಕೆ; ಹೊರಲಕ್ಷಣ; ಹೊರನೋಟ; ಬಾಹ್ಯಲಕ್ಷಣ.
  6. ಮೇಲ್ಮೈ; ಹೊರಮೈ; ತಲ: from the face of the earth ಭೂತಲದಿಂದಲೇ.
  7. ಎದುರು; ಮುಂಭಾಗ; ಮುಮ್ಮುಖ: ಮುಂಪಾರ್ಶ; ಮುಂದುಗಡೆಯ ಯಾ ಮೇಲ್ಗಡೆಯ ಭಾಗ.
  8. ಗಡಿಯಾರ ಮೊದಲಾದವುಗಳ ಫಲಕ, ಇಸ್ಪೀಟು ಎಲೆಯ ಮುಖಭಾಗ, ಮೊದಲಾದವು.
  9. (ಉಪಕರಣ ಮೊದಲಾದವುಗಳ) ಮುಖ; ಅಗ್ರಭಾಗ.
  10. (ಜ್ಯಾಮಿತಿ) ತಲ; ಮುಖ; ಪಾರ್ಶ; ಘನವಸ್ತುವಿನ ಮುಖ.
  11. ಅಚ್ಚುಮೊಳೆಯ ಮುಖ.
  12. (ಗಣಿಯಲ್ಲಿ) ಕಲ್ಲಿದ್ದಿಲಿನ ಪದರದ ಮುಖ; ಹೊರಕ್ಕೆ ಕಾಣಿಸುವ ಕಲ್ಲಿದ್ದಲಿನ ಮೈ.
  13. ಕೀರ್ತಿ; ಪ್ರತಿಷ್ಠೆ; ಒಳ್ಳೆಯ ಹೆಸರು: save one’s face ಒಳ್ಳೆಯ ಹೆಸರು ಕಾಪಾಡಿಕೊ.
ನುಡಿಗಟ್ಟು
  1. face to face ಎದುರೆದುರಾಗಿ; ನೇರವಾಗಿ; ಮುಖಾಮುಖಿಯಾಗಿ; ಪ್ರತ್ಯಕ್ಷವಾಗಿ; ಸಮ್ಮುಖದಲ್ಲಿ.
  2. face to face with ಎದುರೆದುರಾಗಿ ನಿಂತು; ಎದುರಿಗೇ ನಿಂತು; ಎದುರಿಸಿ; ಮುಖಾಮುಖಿಯಾಗಿ.
  3. fly in the face ಎದುರುಬೀಳು; ತಿರುಗಿಬೀಳು; ಪ್ರತ್ಯಕ್ಷವಾಗಿ ಅವಿಧೇಯತೆ ತೋರು.
  4. have the face ಮುಖ ಇಟ್ಟುಕೊಂಡಿರು; ನಿರ್ಲಜ್ಜೆಯಿಂದಿರು; ನಾಚಿಕೆಯಿಲ್ಲದಿರು; ಧಾಷ್ಟದಿಂದ ವರ್ತಿಸು.
  5. her face is her fortune ಅವಳ ರೂಪವೇ ಅವಳ ಸಿರಿ.
  6. in face of.
    1. ಎದುರಾಗಿ; ಎದುರಿಗೆ; ಅಭಿಮುಖವಾಗಿ.
    2. ಹಾಗಿದ್ದರೂ; ಹಾಗಾದರೂ; ಹಾಗಿದ್ದಾಗ್ಯೂ.
  7. in one’s face ಮುಖದ ಮೇಲೆ; (ಒಬ್ಬನು ಎದುರಿಗೆ ಬರುತ್ತಿರುವಾಗ) ನೇರವಾಗಿ ಅವನ ಮೇಲೆ, ಅವನಿಗೆ ಎದುರಾಗಿ.
  8. in the face of = ನುಡಿಗಟ್ಟು \((6)\).
  9. in the face of day ಬಹಿರಂಗವಾಗಿ.
  10. look one in the face ಧೈರ್ಯದಿಂದ, ಚಲಿಸದೆ (ಒಬ್ಬನನ್ನು) ದೃಷ್ಟಿಸಿ ನೋಡು, ದಿಟ್ಟಿಸಿ ನೋಡು, ನೇರವಾಗಿ ನೋಡು.
  11. lose face ಮುಖ ಕೆಡಿಸಿಕೊ; ಅವಮಾನ ಹೊಂದು; ಹೆಸರು ಕೆಡಿಸಿಕೊ.
  12. make a face ಅಣಕಿಸು; ಮುಖಮಾಡು.
  13. make faces = ನುಡಿಗಟ್ಟು \((12)\).
  14. on the face of it ಹೊರ ನೋಟಕ್ಕೆ; ಬಾಹ್ಯದೃಷ್ಟಿಗೆ; ಹೊರನೋಟದಿಂದಲೇ ತೀರ್ಮಾನಿಸಿದರೆ.
  15. pull a face = ನುಡಿಗಟ್ಟು \((12)\).
  16. pull a long face ಜೋಲುಮೋರೆ ಹಾಕಿಕೊ; ನಿರುತ್ಸಾಹದಿಂದಿರು; ಉತ್ಸಾಹಹೀನನಾಗಿರು.
  17. pull faces = ನುಡಿಗಟ್ಟು \((12)\).
  18. put a bold face on it
    1. ಒಂದು ವಿಷಯ ಚೆನ್ನಾಗಿ ಕಾಣುವಂತೆ ಮಾಡು.
    2. (ಬಂದದ್ದನ್ನು) ಧೈರ್ಯದಿಂದೆದುರಿಸು; ಬಂದದ್ದಕ್ಕೆ ಧೈರ್ಯವಾಗಿ ಎದೆಯೊಡ್ಡು.
  19. put a good face on matter = ನುಡಿಗಟ್ಟು \((18)\).
  20. put a new face on ಮುಖ ಬದಲಾಯಿಸು; (ಒಂದರ) ಚಹರೆ ಬದಲಾಯಿಸು; ಬೇರೆ ರೀತಿ ಕಾಣುವಂತೆ ಮಾಡು; ಹೊಸ ಮುಖ ತೊಡು ಯಾ ತೊಡಿಸು.
  21. put one’s face on (ಆಡುಮಾತು) (ನಾಟಕ ಮೊದಲಾದವುಗಳಲ್ಲಿ ಅಭಿನಯಿಸಲು) ಮುಖಕ್ಕೆ ಬಣ್ಣ ಹಾಕಿಕೊ.
  22. save one’s (or person’s) face ಮುಖ ಉಳಿಸು; ಮಾನ ಕಾಪಾಡು; ಮಾನ ರಕ್ಷಿಸು; ಬಹಿರಂಗವಾಗಿ ಮರ್ಯಾದೆ ಹೋಗದಂತೆ ನೋಡಿಕೊ.
  23. set one’s face against ಎದುರಿಸು; ವಿರೋಧಿಸು; ವಿರುದ್ಧವಾಗು; ಪ್ರತಿಭಟಿಸು.
  24. show one’s face ಮುಖ ತೋರಿಸು; ಕಾಣಿಸಿಕೊ; ಕಣ್ಣಿಗೆ ಬೀಳು.
  25. to person’s face (ವ್ಯಕ್ತಿಯ) ಮುಖಕ್ಕೇ; ಎದುರಿಗೇ; ಎದುರಿನಲ್ಲೇ; ಸಮ್ಮುಖದಲ್ಲಿಯೇ; ಎದುರೆದುರಾಗಿಯೇ.
  26. wear a long face = ನುಡಿಗಟ್ಟು \((16)\).
  27. with wind (or sun) in one’s face ಗಾಳಿಗೆ (ಯಾ ಬಿಸಿಲಿಗೆ) ಎದುರಾಗಿ; ಮುಖವೊಡ್ಡಿ; ಗಾಳಿ (ಬಿಸಿಲು) ಮುಖಕ್ಕೆ ಹೊಡೆಯುವಂತೆ.
See also 1face
2face ಹೇಸ್‍
ಸಕರ್ಮಕ ಕ್ರಿಯಾಪದ
  1. ಆತ್ಮವಿಶ್ವಾಸದಿಂದ ಯಾ ಉದ್ಧಟತನದಿಂದ ಎದುರಿಸು.
  2. (ವಾಸ್ತವಾಂಶ ಮೊದಲಾದವುಗಳಿಂದ) ಹಿಮ್ಮೆಟ್ಟದಿರು; ಹಿಂದೆಗೆಯದಿರು.
  3. (ಸ್ಪರ್ಧೆ ಮೊದಲಾದವುಗಳನ್ನು) ಎದುರಿಸಿ ನಿಲ್ಲು; ಎದುರಿಸು.
  4. ನೇರವಾಗಿ ಎದುರಿಸು; ಮುಖಾಮುಖಿಯಾಗಿ ನಿಲ್ಲು.
  5. ಎದುರಾಗು; ಎದುರಿಗಿರು; ಮುಂದೆ ಬರು; ಮುಂದಿರು; ಒದಗಿ ಬರು; ಪ್ರಾಪ್ತವಾಗಿರು; ಎದುರಿಸು: the problem that faces us ನಮ್ಮನ್ನು ಎದುರಿಸುವ ಸಮಸ್ಯೆ; ನಮ್ಮ ಮುಂದೆ ಬಂದಿರುವ ಸಮಸ್ಯೆ; ನಮಗೊದಗಿರುವ ಸಮಸ್ಯೆ.
  6. (ಇಸ್ಪೀಟೆಲೆಯನ್ನು) ಅಂಗಾತನಾಗಿ ಇಡು; ಮೇಲುಮುಖ ಮಾಡು; ಮೇಲ್ಮುಖವಾಗಿಸು; ಮೇಲುಮುಖವಾಗಿ ತಿರುಗಿಸು.
  7. (ಯಾವುದೇ ಒಂದರ) ಕಡೆಗೆ ನೋಡುತ್ತಿರು; ಮುಖ ಮಾಡಿಕೊಂಡಿರು; ಎದುರಾಗಿರು; ಅಭಿಮುಖವಾಗಿರು: to face page 20 ಇಪ್ಪತ್ತನೆಯ ಪುಟಕ್ಕೆ ಎದುರಾಗಿರುವಂತೆ.
  8. (ಲಕ್ರಾಸ್‍, ಐಸ್‍ಹಾಕಿ, ಮೊದಲಾದ ಆಟಗಳಲ್ಲಿ) (ಚೆಂಡು, ರಬ್ಬರ್‍ ಚಕ್ರ, ಮೊದಲಾದವುಗಳನ್ನು) ಉಭಯದಳಗಳ ಆಟಗಾರರಿಬ್ಬರ ಬ್ಯಾಟುಗಳ ನಡುವೆ ಆಟದ ಆರಂಭಸೂಚಕವಾಗಿ ಇಡು ಯಾ ಈ ರೀತಿ ಆಟ ಪ್ರಾರಂಭಿಸು: face off (ಲಕ್ರಾಸ್‍, ಐಸ್‍ಹಾಕಿ ಮೊದಲಾದ ಆಟಗಳಲ್ಲಿ) ಆಟ ಆರಂಭಿಸು.
  9. (ಉಡುಪಿಗೆ) ಮುಂಗೈಪಟ್ಟಿ, ಕೊರಳುಪಟ್ಟಿ, ಮೊದಲಾದ ಭಾಗಗಳನ್ನು ಬೇರೆ ಬಣ್ಣದ ಬಟ್ಟೆಯಲ್ಲಿ ಹಾಕು.
  10. (ಒಂದರ) ಮೇಲ್ಮೈಯನ್ನು ನಯಗೊಳಿಸು.
  11. (ಟೀ ಸೊಪ್ಪಿಗೆ) ಬಣ್ಣಕೊಡು.
  12. (ಅಮೆರಿಕನ್‍ ಪ್ರಯೋಗ) (ಸೈನ್ಯ) (ನಿಂತಲ್ಲಿಯೇ ನಿರ್ದೇಶಿತ ದಿಕ್ಕಿಗೆ) ತಿರುಗಿಸು: he faced his men about ಅವನು ತನ್ನ ಸೈನಿಕರನ್ನು ಹಿಂದಕ್ಕೆ ತಿರುಗಿಸಿದ.
  13. ಮುಖವರಿಸೆ ಕಟ್ಟು; ಹೊರಹೊದಿಕೆ ಹೊದಿಸು; (ಬೇರೊಂದು ಪದಾರ್ಥದ) ಮೇಲ್ಪದರ ಹಾಕು; (ಪದಾರ್ಥವೊಂದರ ಮೇಲ್ಮೈಯನ್ನು ಬೇರೊಂದು ಪದಾರ್ಥದ) ಪದರದಿಂದ ಮುಚ್ಚು.
ಅಕರ್ಮಕ ಕ್ರಿಯಾಪದ
  1. (ಮನುಷ್ಯರು ಮೊದಲಾದವರ ವಿಷಯದಲ್ಲಿ) ಒಂದು ಕಡೆ ನೋಡು; ತಿರುಗಿರು; ತಿರುಗಿಕೊಂಡಿರು; ಅಭಿಮುಖವಾಗು.
  2. (ವಸ್ತುಗಳ ವಿಷಯದಲ್ಲಿ) ಒಂದು ನಿರ್ದಿಷ್ಟ ದಿಕ್ಕಿನಲ್ಲಿರು; ದಿಕ್ಕಿಗೆ – ಅಭಿಮುಖವಾಗಿರು, ತಿರುಗಿಕೊಂಡಿರು.
  3. (ಅಮೆರಿಕನ್‍ ಪ್ರಯೋಗ) (ಸೈನ್ಯ) (ನಿರ್ದಿಷ್ಟ ದಿಕ್ಕಿಗೆ) ತಿರುಗಿಕೊ: face left ಎಡಕ್ಕೆ ತಿರುಗಿಕೊ. face about ಹಿಂದಕ್ಕೆ ತಿರುಗಿಕೊ.
  4. (ಲಕ್ರಾಸ್‍, ಐಸ್‍ಹಾಕಿ, ಮೊದಲಾದ ಆಟಗಳಲ್ಲಿ) ಚೆಂಡನ್ನು ಎರಡು ಪಕ್ಷಗಳ ಯಾ ಇಬ್ಬರು ಆಟಗಾರರ ನಡುವೆ ಇಡು ಯಾ ಹೀಗೆ ಇಟ್ಟು ಆಟ ಆರಂಭಿಸು.
ಪದಗುಚ್ಛ
  1. face matter out
    1. ವಿಷಯವನ್ನು ಕೆಚ್ಚಿನಿಂದ ಸಾಧಿಸಿಯೇ ಬಿಡು, ನಿರ್ವಹಿಸು.
    2. ಹಿಂದೆಗೆಯದಿರು; ಹಿಮ್ಮೆಟ್ಟದಿರು; ಸೋಲೊಪ್ಪದಿರು.
  2. face opponent down
    1. ಎದುರಾಳಿಯನ್ನು ಬಾಯಿಬಡಿ ಯಾ ಬೆದರಿಸು.
    2. ಧೈರ್ಯವಾಗಿ ಎದುರಿಸಿ ಎದುರಾಳಿಯನ್ನು ಈರಿಸು.
  3. face up to
    1. ಧೈರ್ಯವಾಗಿ ಎದುರಿಸು; ಪ್ರತಿಭಟಿಸು; ಹೋರಾಡು.
    2. (ಪರಿಸ್ಥಿತಿ ಮೊದಲಾದವನ್ನು) ಒಪ್ಪಿಕೊಂಡು ಧೈರ್ಯವಾಗಿ ನಿರ್ವಹಿಸು.
  4. let’s face it (ಆಡುಮಾತು) ಎದುರಿಸೋಣ; ಅಹಿತಕರ ಘಟನೆ ಮೊದಲಾದವನ್ನು ಒಪ್ಪಿಕೊಳ್ಳಬೇಕು.
ನುಡಿಗಟ್ಟು

face the music ಅಹಿತಕರ ಪರಿಣಾಮವನ್ನು, ಮುಖ್ಯವಾಗಿ ಟೀಕೆಯನ್ನು, ಧೈರ್ಯವಾಗಿ ಎದುರಿಸಿ ನಿಲ್ಲು.