fabric ಹ್ಯಾಬ್ರಿಕ್‍
ನಾಮವಾಚಕ
  1. ಜೋಡಣೆ; ಜೋಡಿಸಿದ ವಸ್ತು; ಒಟ್ಟಿಗೆ ಕೂಡಿಸಿ ನಿರ್ಮಿಸಿದ ಯಾವುದೇ ವಸ್ತು.
  2. (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ದೊಡ್ಡ) ಕಟ್ಟಡ; ಸೌಧ; ಭವನ.
  3. ಚೌಕಟ್ಟು; ಬಂಧ; ಕಟ್ಟಡ; ಆಧಾರವಾದ ರಚನೆ (ರೂಪಕವಾಗಿ ಸಹ).
  4. (ರೂಪಕವಾಗಿ) ಸೃಷ್ಟಿ; ರಚನೆ; ನಿರ್ಮಾಣ: this goodly fabric of heaven and earth ಈ ದ್ಯಾವಾಪೃಥಿವಿಗಳ ಸುಂದರಸೃಷ್ಟಿ.
  5. ನೆಯ್ದ ಯಾ ಹೆಣೆದ ಬಟ್ಟೆ, ವಸ್ತ್ರ: textile fabric ನೆಯ್ದ ಬಟ್ಟೆ.
  6. ನೆಯ್ದ ಬಟ್ಟೆಯನ್ನು ಹೋಲುವ ಯಾವುದೇ ವಸ್ತು.
  7. ರಚಿಸುವಿಕೆ; ರಚನೆ; ನಿರ್ಮಾಣ.
  8. ಹೆಣಿಗೆ ನೆಯ್ಗೆ; ಬಂಧ (ರೂಪಕವಾಗಿ ಸಹ).
  9. ಕಟ್ಟಡ; ಕಟ್ಟಡದ ಗೋಡೆ, ನೆಲ ಮತ್ತು ಚಾವಣಿ.