See also 2fable
1fable ಹೇಬ್‍ಲ್‍
ನಾಮವಾಚಕ
  1. (ಮುಖ್ಯವಾಗಿ ವಾಸ್ತವಾಂಶದ ಆಧಾರವಿಲ್ಲದ, ಅಲೌಕಿಕ ಯಾ ಅತಿಪ್ರಾಕೃತಿಕ ಆದ) ಕಲ್ಪಿತಕಥೆ; ಕಟ್ಟುಕಥೆ.
  2. (ಸಮುದಾಯ ವಾಚಕ)
    1. ಪುರಾಣಕಥೆಗಳು.
    2. ಐತಿಹ್ಯಗಳು.
    3. ಗೊಡ್ಡುಹರಟೆ; ಕಂತೆ ಪುರಾಣ: old wive’s fables ಅಡುಗೂಲಜ್ಜಿಯ ಕಥೆಗಳು.
  3. ಸುಳ್ಳು (ಹೇಳಿಕೆ); ಕಟ್ಟುಕಥೆ; ಬುರುಡೆ.
  4. ಕಾಲ್ಪನಿಕ ವಸ್ತು; ಊಹನೆಯ ವಸ್ತು; ಇದೆಯೆಂದು ಭಾವಿಸಿರುವ ವಸ್ತು.
  5. (ಮುಖ್ಯವಾಗಿ ಪ್ರಾಣಿಗಳನ್ನೇ ಪಾತ್ರವಾಗಿ ಉಳ್ಳ) ನೀತಿಕಥೆ.
  6. (ಪ್ರಾಚೀನ ಪ್ರಯೋಗ) (ನಾಟಕ ಮೊದಲಾದವುಗಳ) ಕಥಾವಸ್ತು.
  7. (ಜನಜನಿತವಾಗಿರುವ) ಮನೆಮಾತು; ಜನವಾರ್ತೆ; ಮನೆಮಾತಾಗಿರುವ ವ್ಯಕ್ತಿ ಮೊದಲಾದವು.
See also 1fable
2fable ಹೇಬ್‍ಲ್‍
ಸಕರ್ಮಕ ಕ್ರಿಯಾಪದ

ಕಟ್ಟುಕಥೆಯಂತೆ ಹೇಳು; ಕಲ್ಪಿತವಾಗಿ ವರ್ಣಿಸು.

ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ ಮತ್ತು ಕಾವ್ಯಪ್ರಯೋಗ) ಕಟ್ಟುಕಥೆ ಹೇಳು; ಚಿತ್ರವಿಚಿತ್ರ ಕಥೆಕಟ್ಟು; ಕಲ್ಪಿತ ಕಥೆ ಹೇಳು.
  2. ಸುಳ್ಳುಸುಳ್ಳಾಗಿ ಹೇಳು.