exuberate ಇ(ಎ)ಗ್‍ಸ್ಯೂ(ಸೂ)ಬರೇಟ್‍
ಅಕರ್ಮಕ ಕ್ರಿಯಾಪದ
  1. ತುಂಬಿರು; ತುಂಬಿ ತುಳುಕು; ಮೇರೆವರಿ; ತುಂಬಿಹರಿ; ಸಮೃದ್ಧವಾಗಿರು: whose breast exuberated with human kindness ಯಾರಎದೆ ಮಾನವೀಯ ಕರುಣೆಯಿಂದ ತುಂಬಿ ತುಳುಕುತ್ತಿತ್ತೋ.
  2. (ಪ್ರಾಚೀನ ಪ್ರಯೋಗ) (ಸಂತೃಪ್ತ ಭಾವನೆಯೊಂದಿಗೆ) ಲವಲವಿಕೆಯಿಂದಿರು; ಓಲಾಡು; ನಿರಾತಂಕವಾಗಿ ವ್ಯವಹರಿಸು: she exuberated in the delicious sense of romance ಅವಳು ಸುಮಧುರ ರಮ್ಯಭಾವನೆಗಳಿಂದ ಓಲಾಡಿದಳು.
  3. (ಪ್ರಾಚೀನ ಪ್ರಯೋಗ) ಸಮೃದ್ಧವಾಗಿ ಬೆಳೆದು ರೊಪಗೊಳ್ಳು; ಪುಷ್ಕಳವಾಗಿ ಬೆಳೆ: exuberate into an atheist ನಾಸ್ತಿಕನಾಗಿ ಬೆಳೆ.