exuberant ಇ(ಎ)ಗ್‍ಸ್ಯೂ(ಸೂ)ಬರಂಟ್‍
ಗುಣವಾಚಕ
  1. ವಿಪುಲವಾದ; ಫಲ ತುಂಬಿರುವ; ತುಂಬಿ ತುಳುಕುವ; ಸಮೃದ್ಧವಾದ (ರೂಪಕವಾಗಿ ಸಹ): the earth so exuberant in the production of metals ಲೋಹಗಳಿಂದ ಸಮೃದ್ಧವಾದ ಭೂಮಿ.
  2. ಸಮೃದ್ಧವಾಗಿ ಬೆಳೆಯುವ; ಹಲುಸಾದ; ಸೊಂಪಾದ; ಹೊರವಾದ; ಉರುಬಾದ: exuberant vegetation ಸಮೃದ್ಧವಾಗಿ ಬೆಳೆದ ಸಸ್ಯಾದಿಗಳು.
  3. (ಆರೋಗ್ಯ, ಮನೋಭಾವಗಳು, ಮೊದಲಾದವುಗಳ ವಿಷಯದಲ್ಲಿ) ಉಕ್ಕಿ ಹರಿಯುವ; ತುಂಬಿ ತುಳುಕುವ: exuberant love, health ತುಂಬಿತುಳುಕುವ ಪ್ರೇಮ, ಆರೋಗ್ಯ.
  4. (ಮನುಷ್ಯರು, ಕಾರ್ಯಗಳು, ಮೊದಲಾದವುಗಳ ವಿಷಯದಲ್ಲಿ) ಉತ್ಸಾಹಪೂರ್ಣ; ಉತ್ಸಾಹ ತುಂಬಿದ; ಸುಟಿಯಾದ; ಲವಲವಿಕೆಯುಳ್ಳ: an exuberant welcome for the hero ವೀರನಿಗೆ (ನೀಡಿದ) ಉತ್ಸಾಹಭರಿತ ಸ್ವಾಗತ.
  5. (ಭಾಷೆ, ಶೈಲಿ, ಅಭಿವ್ಯಕ್ತಿ, ಮೊದಲಾದವುಗಳ ವಿಷಯದಲ್ಲಿ) ಅಲಂಕಾರಾತಿಶಯದ; ಶಬ್ದಬಾಹುಳ್ಯದಿಂದ ತುಂಬಿದ: heaping exuberant praise on him ಹೇರಳವಾದ ಆಡಂಬರದ ಪ್ರಶಂಸೆಯನ್ನು ಅವನ ಮೇಲೆ ಹೇರಿ.
  6. ಪುಷ್ಕಳ; ವಿಪುಲ; ಬಹುಳ: the exuberant display of wealth in our shops ನಮ್ಮ ಅಂಗಡಿಗಳಲ್ಲಿ (ಕಾಣಸಿಗುವ) ಸಂಪತ್ತಿನ ಪುಷ್ಕಳ ಪ್ರದರ್ಶನ.