extrude ಎ(ಇ)ಕ್ಸ್‍ಟ್ರೂಡ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯನನ್ನು, ವಸ್ತುವನ್ನು) ಹೊರನೂಕು; ಹೊರತಳ್ಳು; ಹೊರಡಿಸು; ಹೊರದಬ್ಬು; ಹೊರಹಾಕು.
  2. ನಿಸ್ಸರಿಸು; (ಕಾಯಿಸಿದ ಲೋಹ, ಪ್ಲಾಸ್ಟಿಕ್ಕು, ಮೊದಲಾದವನ್ನು) ನಿರ್ದಿಷ್ಟ ಆಕೃತಿಯ ರಂಧ್ರದ ಮೂಲಕ ಒತ್ತಿ ಕಳುಹಿಸಿ ಉದ್ದೇಶಿತ ರೂಪ ಕೊಡು.
ಅಕರ್ಮಕ ಕ್ರಿಯಾಪದ
  1. ಮುಂಚಾಚು; ಹೊರಚಾಚು.
  2. ನಿಸ್ಸರಿಸು; (ಕಾಯಿಸಿದ ಲೋಹ, ಪ್ಲಾಸ್ಟಿಕ್ಕು, ಮೊದಲಾದವುಗಳ ವಿಷಯದಲ್ಲಿ) ನಿರ್ದಿಷ್ಟ ಆಕೃತಿಯ ರಂಧ್ರದ ಮೂಲಕ ಹಾದು ಉದ್ದೇಶಿತ ರೂಪ ಪಡೆ.