extremity ಇ(ಎ)ಕ್ಸ್‍ಟ್ರಿಮಿಟಿ
ನಾಮವಾಚಕ
  1. ಕಟ್ಟಕಡೆ; ಕೊಟ್ಟಕೊನೆ; ತುತ್ತತುದಿ.
  2. ಕೊನೆಯ ಘಟ್ಟ; ಪರಮಾವಧಿ.
  3. ಅತಿಕಷ್ಟ; ಅತ್ಯಂತ ಕ್ಲೇಶ; ವಿಷಮಸ್ಥಿತಿ; ಉತ್ಕಟಾವಸ್ಥೆ; ಇಕ್ಕಟ್ಟು: what can we do in this extremity? ಈ ಇಕ್ಕಟ್ಟಿನಲ್ಲಿ ನಾವೇನು ಮಾಡಬಲ್ಲೆವು?
  4. (ಪ್ರಾಚೀನ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) ತೀವ್ರಕ್ರಮಗಳು; ಕಟ್ಟಕಡೆಯ ಉಪಾಯಗಳು: to go to extremities to feed the children ಮಕ್ಕಳ ಹಸಿವನ್ನು ಪರಿಹರಿಸಲು ತೀವ್ರಕ್ರಮ ಕೈಗೊಳ್ಳಲು.
  5. ಉಗ್ರತೆ; ಅತಿರೇಕ: the extremity of his views on foreign trade ವಿದೇಶೀ ವ್ಯಾಪಾರವನ್ನು ಕುರಿತ ಅವನ ಉಗ್ರ ಅಭಿಪ್ರಾಯಗಳು.
  6. (ಬಹುವಚನದಲ್ಲಿ) ಕೈಕಾಲುಗಳು; ಹಸ್ತಗಳು, ಪಾದಗಳು.