extradition ಎಕ್ಸ್‍ಟ್ರಡಿಷನ್‍
ನಾಮವಾಚಕ
  1. ಕೈವರ್ತನೆ; (ತಪ್ಪಿಸಿಕೊಂಡು ಬಂದು ಅಡಗಿಕೊಂಡಿರುವ ಪರದೇಶದ ತಕ್ಸೀರುದಾರರನ್ನು ಒಪ್ಪಂದ ಯಾ ಕರಾರಿನಂತೆ) ಅಧಿಕಾರಿಗಳಿಗೆ ಒಪ್ಪಿಸುವುದು.
  2. (ಮನಶ್ಶಾಸ್ತ್ರ) ಕೈವರ್ತನೆ; ಅನ್ಯತ್ರಗ್ರಹಣ; ದೂರಗ್ರಹಣ; ಇಂದ್ರಿಯ ವೇದನೆಯ ಅದರ ಉತ್ಪತ್ತಿ ಸ್ಥಾನದಿಂದ ದೂರದಲ್ಲಿದೆಯೆಂದು ಗುರುತಿಸುವುದು, ಭಾವಿಸುವುದು; ಇಂದ್ರಿಯಸಂವೇದನೆಯನ್ನು ಅದರ ಉತ್ಪತ್ತಿಸ್ಥಾನದಿಂದ ದೂರವಾಗಿ ಯಾ ದೂರದಲ್ಲಿ ಇರುವಂತೆ ಗ್ರಹಿಸುವುದು.