extraction ಇ(ಎ)ಕ್ಸ್‍ಟ್ರಾಕ್‍ಷನ್‍
ನಾಮವಾಚಕ
  1. (ಪುಸ್ತಕದ ಭಾಗ ಮೊದಲಾದವನ್ನು) ಎತ್ತಿ ಬರೆಯುವುದು; ಪ್ರತಿ ಮಾಡುವಿಕೆ; ನಕಲು ಮಾಡುವುದು.
  2. (ಪುಸ್ತಕ ಮೊದಲಾದವುಗಳಿಂದ) ಉದ್ಧರಿಸುವುದು; ಸಂಗ್ರಹಿಸುವುದು.
  3. (ಹಲ್ಲು ಮೊದಲಾದವುಗಳ) ಉತ್ಪಾಟನ; ಬಲವಂತದಿಂದ ಕೀಳುವುದು; ಕಿತ್ತುಹಾಕುವುದು.
  4. (ಹಣ ಮೊದಲಾದವನ್ನು) ಬಲವಂತದಿಂದ ಸೆಳೆಯುವುದು.
  5. ಆಹರಣ; ರಸ ತೆಗೆಯುವಿಕೆ; ಸಾರ ತೆಗೆಯುವಿಕೆ.
  6. (ಸಂತೋಷ ಮೊದಲಾದವನ್ನು) ಪಡೆಯುವುದು.
  7. (ತತ್ತ್ವ ಮೊದಲಾದವುಗಳ) ನಿಗಮನ.
  8. (ಗಣಿತ) ಆಹರಣ; (ಸಂಖ್ಯೆಯ) ಘಾತಮೂಲವನ್ನು ತೆಗೆಯುವಿಕೆ.
  9. ವಂಶ; ಗೋತ್ರ; ಕುಲ; ಹುಟ್ಟು; ತಳಿ: of Indian extraction ಭಾರತೀಯ ವಂಶಸ್ಥ.