extractable ಇ(ಎ)ಕ್ಸ್‍ಟ್ರಾಕ್ಟಬ್‍ಲ್‍
ಗುಣವಾಚಕ
  1. ಎತ್ತಿ ಬರೆದಿಡಬಹುದಾದ; ಪ್ರತಿಮಾಡಲು ಸಾಧ್ಯವಾದ; ನಕಲೆತ್ತಬಹುದಾದ.
  2. ಸಂಗ್ರಾಹ್ಯ; ಉದ್ಧರಣೀಯ; ಸಂಗ್ರಹಿಸಬಹುದಾದ.
  3. (ಹಲ್ಲು ಮೊದಲಾದವುಗಳ ವಿಷಯದಲ್ಲಿ, ಬಲವಂತದಿಂದ) ಉತ್ಪಾಟ್ಯ; ಕೀಳಲು ಸಾಧ್ಯವಾದ; ಕಿತ್ತುಹಾಕಬಹುದಾದ.
  4. (ಹಣ ಮೊದಲಾದವನ್ನು) ಬಲವಂತದಿಂದ ಸೆಳೆಯಬಹುದಾದ.
  5. ಆಹರಣೀಯ; ರಸ ಯಾ ಸಾರ ತೆಗೆಯಲು ಸಾಧ್ಯವಿರುವ.
  6. (ಸಂತೋಷ ಮೊದಲಾದವನ್ನು) ಪಡೆಯಬಹುದಾದ.
  7. (ಯಾವುದೋ ಒಂದರಿಂದ ತತ್ತ್ವ ಮೊದಲಾದವನ್ನು) ನಿಗಮನ ಮಾಡಬಹುದಾದ.
  8. (ಗಣಿತ) ಆಹರಣೀಯ; (ಸಂಖ್ಯೆಯ ಘಾತಮೂಲ) ತೆಗೆಯಲು ಸಾಧ್ಯವಿರುವ.