extinguishable ಇ(ಎ)ಕ್ಸ್‍ಟಿಂಗ್ವಿಷಬ್‍ಲ್‍
ಗುಣವಾಚಕ
  1. (ಬೆಳಕು ಮೊದಲಾದವುಗಳ ವಿಷಯದಲ್ಲಿ) ನಂದಿಸಬಹುದಾದ; ಅಳಿಸಿಬಿಡಬಹುದಾದ; ಆರಿಹೋಗವಂಥ.
  2. (ಅತಿಶಯ ಪ್ರತಿಭೆ ಮೊದಲಾದವುಗಳನ್ನು) ಮುಚ್ಚಿಬಿಡಬಹುದಾದ; ಮರೆಮಾಡಬಲ್ಲ; ಮುಚ್ಚಿಬಿಡುವ.
  3. (ಎದುರಾಳಿಯ ವಿಷಯದಲ್ಲಿ) ತೆಪ್ಪಗಾಗಿಸಬಲ್ಲ; ಉಸಿರೆತ್ತದೆಂತೆ, ಮಾತೆತ್ತದಂತೆ — ಮಾಡಬಹುದಾದ; ಬಾಯಿ ಮುಚ್ಚಿಸಬಹುದಾದ.
  4. ನಾಶಮಾಡಬಹುದಾದ; ಕೊನೆಗಾಣಿಸಬಹುದಾದ; ಕೊನೆಗಾಣಬಲ್ಲ; ನಿರ್ನಾಮವಾಗುವ; ನಿರ್ಮೂಲಗೊಳಿಸಬಹುದಾದ.
  5. (ಸಾಲ) ತೀರಿಸಬಹುದಾದ; ಫೈಸಲಾಗಿಸಬಹುದಾದ; ತೀರುವಳಿ ಮಾಡುವಂಥ.
  6. ರದ್ದುಗೊಳಿಸಬಹುದಾದ.