extinguish ಇ(ಎ)ಕ್ಸ್‍ಟಿಂಗ್ವಿಷ್‍
ಸಕರ್ಮಕ ಕ್ರಿಯಾಪದ
  1. (ಬೆಳಕು, ಭರವಸೆ, ಜೀವ, ಬುದ್ಧಿಶಕ್ತಿ, ಮೊದಲಾದವನ್ನು) ನಂದಿಸು; ಅಳಿಸು; ಆರಿಸು.
  2. (ಪ್ರಾಚೀನ ಪ್ರಯೋಗ) (ಒಬ್ಬನನ್ನು) (ತನ್ನ ಅತಿಶಯ ಪ್ರಭೆ, ಮಹಿಮೆಯಿಂದ) ಮರಸು; ಮುಚ್ಚಿಹಾಕು; ಆಚ್ಛಾದಿಸು.
  3. (ಎದುರಾಳಿಯನ್ನು) ತೆಪ್ಪಗಾಗಿಸು; ತಣ್ಣಗೆಮಾಡು; ಬಾಯಿಮುಚ್ಚಿಸು; ಬಾಯಿಕಟ್ಟಿಸು; ಮಾತೆತ್ತದಂತೆ ಮಾಡು; ತುಟಿಪಿಟಕ್ಕೆನ್ನದಂತೆ ಮಾಡು.
  4. ಕೊನೆಗಾಣಿಸು; ನಿಲ್ಲಿಸು; ಇಲ್ಲವೆನಿಸು; ನಿರ್ಮೂಲಗೊಳಿಸು: it extinguishes all heinous crimes ಅದು ಹೇಯ ಅಪರಾಧಗಳನ್ನೆಲ್ಲಾ ನಿರ್ಮೂಲಗೊಳಿಸುತ್ತದೆ.
  5. (ಸಾಲವನ್ನು) ತೀರಿಸು; ಸಲ್ಲಿಸಿ ಮುಗಿಸು; ತೀರುವಳಿ ಮಾಡು; ಫೈಸಲ್‍ ಮಾಡು.
  6. (ಕುಲ, ಸಂತತಿ, ಮೊದಲಾದವನ್ನು) ನಾಶಗೊಳಿಸು; ನಿರ್ನಾಮಮಾಡು; ಮೂಲೋತ್ಪಾಟನಗೊಳಿಸು; ಹುಟ್ಟಡಗಿಸು: extinguishing the Red man by the progress of civilization ನಾಗರಿಕತೆಯ ಪ್ರಗತಿಯಿಂದ ರೆಡ್‍ ಇಂಡಿಯನ್‍ ಬುಡಕಟ್ಟನ್ನೇ ನಿರ್ನಾಮ ಮಾಡಿ.
  7. (ಹಕ್ಕು, ಬಾಧ್ಯತೆ, ಮೊದಲಾದವನ್ನು) ರದ್ದುಗೊಳಿಸು; ರದ್ದಾಗಿಸು.