extinction ಇ(ಎ)ಕ್ಸ್‍ಟಿಂಕ್‍ಷನ್‍
ನಾಮವಾಚಕ
  1. ನಂದಿಕೆ; ನಂದಿಸುವುದು; ಆರಿಸುವುದು.
  2. ನಂದಿಕೆ; ನಂದಿಹೋಗುವುದು; ಆರಿಹೋಗುವುದು; ಆರಿಹೋಗಿರುವುದು.
  3. (ಸಾಲ) ತೀರುವಳಿ; ತೊಡೆದು ಹಾಕುವುದು; ಇಲ್ಲವಾಗಿಸುವುದು.
  4. ಅಳಿವು; ನಾಶ; ನಿರ್ಮೂಲನ; ನಿರ್ಮೂಲ — ಮಾಡುವುದು, ಆಗುವುದು, ಆಗಿರುವುದು.
  5. (ಅಧಿಕಾರ ಮೊದಲಾದವುಗಳ) ರದ್ದಿಯಾತಿ; ರದ್ದು.
  6. ಅಪ್ರಚಲಿತತೆ; ಅರೂಢತೆ.
  7. ನಾಶ; ಧ್ವಂಸವಾಗುವುದು; ನಿರ್ನಾಮವಾಗುವುದು.
  8. (ಭೌತವಿಜ್ಞಾನ) ನಂದಿಕೆ; ವಿಲಯ, ಹೀರುವಿಕೆ, ಚದುರುವಿಕೆ, ಮೊದಲಾದವುಗಳಿಂದ ವಿಕಿರಣದ ತೀಕ್ಷ್ಣತೆ ಕಡಮೆ ಆಗುವುದು ಯಾ ಮಾಡುವುದು.