externalize ಎ(ಇ)ಕ್ಸ್‍ಟರ್ನಲೈಸ್‍
ಸಕರ್ಮಕ ಕ್ರಿಯಾಪದ
  1. ಬಾಹ್ಯೀಕರಿಸು; ಹೊರಗಿನದನ್ನಾಗಿಸು; ಬಾಹ್ಯವಾದುದನ್ನಾಗಿಸು.
  2. ಬಾಹ್ಯಾಸ್ತಿತ್ವ ಕೊಡು; ಹೊರ ಅಸ್ತಿತ್ವ ಕಲ್ಪಿಸು ಯಾ ಆರೋಪಿಸು.
  3. ಮೂರ್ತೀಕರಿಸು; ಮೂರ್ತಗೊಳಿಸು; ಮೂರ್ತರೂಪ ಕೊಡು; ಬಾಹ್ಯಾಕೃತಿ ಒದಗಿಸು; ಬಾಹ್ಯ ರೂಪ ಕೊಡು.
  4. ಬಾಹ್ಯಾಂಶಗಳೆಂದು ಪರಿಗಣಿಸು; ಅಪ್ರಧಾನಾಂಶಗಳೆಂದು ಎಣಿಸು.
  5. ಬಾಹ್ಯಕೃತವೆಂದು ಎಣಿಸು; ಹೊರ ಕಾರಣಗಳಿಂದ ಯಾ ಬಾಹ್ಯಾಂಶಗಳಿಂದ ಆದುದೆಂದು ಪರಿಗಣಿಸು.
  6. (ವ್ಯಕ್ತಿತ್ವವನ್ನು) ಹೊರಮುಖವಾಗಿಸು; ಬಹಿರ್ಮುಖವಾಗಿಸು; ಸಾಮಾಜಿಕ ಸಂಬಂಧ, ವ್ಯವಹಾರಗಳಲ್ಲಿ ಅಂತರ್ಮುಖವಾಗಿರದೆ ಹೊರಗಿನವುಗಳಲ್ಲಿ ಆಸಕ್ತಿ ವಹಿಸುವಂತೆ ಮಾಡು.