externality ಎಕ್ಸ್‍ಟರ್ನ್ಯಾಲಿಟಿ
ನಾಮವಾಚಕ
  1. ಹೊರತನ; ಬಾಹ್ಯತೆ; ಬಾಹ್ಯತ್ವ:
    1. ಬಾಹ್ಯವಾಗಿ ಕಾಣಿಸಿಕೊಳ್ಳುವ ಗುಣ; ಬಾಹ್ಯಗುಣ; ಹೊರಗುಣ.
    2. ಹೊರರೂಪ; ಬಾಹ್ಯರೂಪ.
    3. ಹೊರಸ್ಥಿತಿ; ಬಾಹ್ಯಾವಸ್ಥೆ; ಬಾಹ್ಯವಾಗಿರುವುದು.
    4. ತೋರ್ಕೆ; ಮೇಲ್ಮೈನದು; ಆಳವಿಲ್ಲದ್ದು.
    5. ವಸ್ತುವೊಂದರಿಂದ ಯಾ ವ್ಯಕ್ತಿಯೊಬ್ಬನಿಂದ ಬೇರೆಯಾಗಿ, ಸ್ವತಂತ್ರವಾಗಿ ಇರುವುದು.
    6. ಹೊರಗಿನಿಂದ ಕೆಲಸ ಮಾಡುವುದು ಯಾ ಪ್ರಭಾವ ಬೀರುವುದು.
  2. ವಸ್ತುಭೂತತೆ; ಬಾಹ್ಯಾಸ್ತಿತ್ವ; ಜ್ಞಾತೃವಿನಿಂದ ಬೇರೆಯಾಗಿ, ಅವನಿಂದ ಹೊರಗೆ ಇರುವುದು. ಬಾಹ್ಯಪ್ರಪಂಚಕ್ಕೆ ಸೇರಿದುದು; ಬಾಹ್ಯದಲ್ಲಿ ಇರುವುದು.
  3. (ಬಹುವಚನದಲ್ಲಿ) ಬಾಹ್ಯವಸ್ತು(ಗಳು); ಹೊರ ವಸ್ತು(ಗಳು): the externalities of wealth, friends and fame ಸಿರಿ, ಸ್ನೇಹಿತರು, ಕೀರ್ತಿಗಳಂಥ ಬಾಹ್ಯ ವಸ್ತುಗಳು.
  4. ಬಾಹ್ಯಘಟನೆ, ಪರಿಸ್ಥಿತಿ ಮೊದಲಾದವು.
  5. ಬಾಹ್ಯಾಸಕ್ತಿ; ಬಾಹ್ಯಮಗ್ನತೆ; ಬಾಹ್ಯ ಪ್ರಪಂಚ, ಆಚರಣೆ, ಅಂಶ, ಮೊದಲಾದವುಗಳಲ್ಲಿ ಅತಿಯಾದ ಆದರ, ಶ್ರದ್ಧೆ.