extension ಇ(ಎ)ಕ್ಸ್‍ಟೆನ್ಷನ್‍
ನಾಮವಾಚಕ
  1. (ಮುಖ್ಯವಾಗಿ ದೇಹ, ಕೈಕಾಳುಗಳು, ಮೊದಲಾದವನ್ನು ಉದ್ದಕ್ಕೂ) ನೀಡುವುದು; ಚಾಚುವುದು; ಚಾಚಿಕೆ; ನೀಡಿಕೆ.
  2. (ಶೀಘ್ರಲಿಪಿ ಮೊದಲಾದವನ್ನು) ವಿಸ್ತರಿಸಿ ಬರೆಯುವುದು; ಪೂರ್ಣಲೇಖನ.
  3. ಮುಟ್ಟುವುದು; ತಲುಪುವುದು; ಹಾಯುವುದು; ವ್ಯಾಪಿಸುವುದು; ನಿಲುಕುವುದು.
  4. ಮುಟ್ಟಿಸುವುದು; ತಲುಪಿಸುವುದು; ಹಾಯಿಸುವುದು; ವ್ಯಾಪಿಸುವಂತೆ ಮಾಡುವುದು; ನಿಲುಕಿಸುವುದು.
  5. (ಕಾಲಾವಧಿಯನ್ನು) ಹೆಚ್ಚಿಸುವುದು; ಬೆಳೆಸುವುದು; ಲಂಬಿಸುವುದು; ವಿಸ್ತರಿಸುವುದು; ವಿಸ್ತರಣೆ.
  6. (ವ್ಯಾಪ್ತಿ, ಪದದ ಅರ್ಥ, ಮೊದಲಾದವನ್ನು) ಹೆಚ್ಚಿಸುವುದು; ವಿಶಾಲಗೊಳಿಸುವುದು; ವಿಸ್ತರಿಸುವುದು; ವಿಸ್ತರಣೆ.
  7. (ಸೇನೆ) (ಸಾಲು ಮೊದಲಾದವುಗಳ ವಿಷಯದಲ್ಲಿ) ಸಮಾಂತರ ವಿಸ್ತರಣೆ; ಸೈನಿಕರ ನಡುನಡುವೆ ಸಮವಾದ ಅಂತರ ಬಿಟ್ಟು ಸಾಲನ್ನು ವಿಸ್ತರಿಸುವುದು ಯಾ ಸೈನಿಕರ ನಡುನಡುವೆ ಸಮವಾದ ಅಂತರ ಬಿಟ್ಟು ಸಾಲು ವಿಸ್ತಾರವಾಗುವುದು.
  8. (ಅಶಿಷ್ಟ) (ಕುದರೆ, ಜಟ್ಟಿ ಇವರ ವಿಷಯದಲ್ಲಿ) ಅತಿದುಡಿಮೆ; ಅತಿ ದುಡಿಸುವುದು; ತೀರ ಬಳಲಿಸುವುದು; ಸುಸ್ತಾಗುವಷ್ಟು ದಣಿಸುವುದು; ಶಕ್ತಿಯನ್ನು ಪರಮಾವಧಿ ಬಳಸುವಂತೆ ಬಲಾತ್ಕರಿಸುವುದು.
  9. (ಕೈಯನ್ನು, ತೋಳನ್ನು) ನೀಡುವುದು; ಚಾಚುವುದು; ನೀಡಿಕೆ; ಚಾಚಿಕೆ.
  10. (ದಯೆ, ಆಶ್ರಯ) ನೀಡಿಕೆ; ದಾನ; ಪ್ರದಾನ; ನೀಡುವುದು.
  11. ಹರವು; ವ್ಯಾಪ್ತಿ; ವಿಸ್ತಾರ.
  12. ಉದ್ದಗೊಳಿಸುವುದು; ಲಂಬನ; ಲಂಬಿಸುವುದು; ದೀರ್ಘೀಕರಣ.
  13. ಬಡಾವಣೆ; ವಿಸ್ತರಣ.
  14. ರೈಲುಮಾರ್ಗ, ಯೋಜನೆ, ಸಿದ್ಧಾಂತ, ಮೊದಲಾದವುಗಳ ವಿಸ್ತೃತಭಾಗ; ವರ್ಧಿಸಿದ ಭಾಗ.
  15. (ವ್ಯಾಕರಣ) ವಿಶೇಷಣಗಳು; ಕರ್ತೃಪದ ಯಾ ಕ್ರಿಯಾಪದವನ್ನು ವಿವರಿಸುವ ಪದ ಯಾ ಪದಗಳು.
  16. (ತರ್ಕಶಾಸ್ತ್ರ) ಅರ್ಥವ್ಯಾಪ್ತಿ; ಒಂದು ಪದದ ಅರ್ಥ ಒಳಗೊಂಡಿರುವ ವಸ್ತುಗಳ ಯಾ ವಿಷಯಗಳ ವರ್ಗ.
  17. ವಿಸ್ತರಣ:
    1. ಮನೆ ಯಾ ಇತರ ಕಟ್ಟಡಕ್ಕೆ ಹೊಸದಾಗಿ ಸೇರಿಸಿದ ಭಾಗ.
    2. ಪ್ರಧಾನ ದೂರವಾಣಿಯಿಂದ ದೂರವಿರುವ, ಆದರೆ ಅದರ ಅಂಗವಾಗಿರುವ ದೂರವಾಣಿ.
    3. ಅಂಥ ವಿಸ್ತರಣ ದೂರವಾಣಿಯ ಸಂಖ್ಯೆ.
  18. (ಅನಿವಾಸಿ ಯಾ ಕ್ರಮಬದ್ಧರಲ್ಲದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಯಾ ಕಾಲೇಜು ನೀಡುವ) ವಿಶೇಷ ಬೋಧನೆ; ಅಧಿಕೋಪನ್ಯಾಸ.