extend ಇ(ಎ)ಕ್ಸ್‍ಟಂಡ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ದೇಹ, ಕೈಕಾಲುಗಳು, ಮೊದಲಾದವನ್ನು ಉದ್ದಕ್ಕೆ) ಚಾಚು; ನೀಡು.
  2. (ಶೀಘ್ರಲಿಪಿ ಮೊದಲಾದವನ್ನು) ವಿಸ್ತರಿಸಿ ಬರೆ; ಪೂರ್ತಿ ಬರೆ.
  3. ಮುಟ್ಟಿಸು; ತಲುಪಿಸು; ಹಾಯಿಸು; ವ್ಯಾಪಿಸುವಂತೆ ಮಾಡು.
  4. (ಕಾಲಾವಧಿಯನ್ನು) ಹೆಚ್ಚಿಸು; ಬೆಳಸು; ಲಂಬಿಸು; ವಿಸ್ತರಿಸು.
  5. (ವ್ಯಾಪ್ತಿ, ಪದದ ಅರ್ಥ, ಮೊದಲಾದವನ್ನು) ಹೆಚ್ಚಿಸು; ಹಿಗ್ಗಿಸು; ವಿಶಾಲಗೊಳಿಸು; ವಿಸ್ತರಿಸು.
  6. (ಸೇನೆ, ಸಾಲು, ಮೊದಲಾದವುಗಳ ವಿಷಯದಲ್ಲಿ) ಸೈನಿಕರ ನಡುನಡುವೆ ಸಮವಾದ ಅಂತರ ಬಿಟ್ಟು ಸಾಲನ್ನು ಹರಡು, ವಿಸ್ತರಿಸು.
  7. (ಅಶಿಷ್ಟ) (ಸಾಮಾನ್ಯವಾಗಿ ಆತ್ಮಾರ್ಥಕ ಯಾ ಕರ್ಮಣಿಪ್ರಯೋಗ) (ಕುದುರೆ, ಜಟ್ಟಿ ಇವರ ವಿಷಯದಲ್ಲಿ) ಅತಿಯಾಗಿ ದುಡಿಸು; ತೀರ ಬಳಲಿಸು; ಸುಸ್ತಾಗುವಷ್ಟು ದಣಿಸು; ಶಕ್ತಿಯನ್ನು ಪರಮಾವಧಿ ಬಳಸುವಂತೆ ಬಲವಂತ ಮಾಡು.
  8. (ಕೈಯನ್ನು, ತೋಳನ್ನು) ಚಾಚು; ನೀಡು.
  9. (ದಯೆ, ಆಶ್ರಯ) ನೀಡು.
  10. (ಆಹ್ವಾನ, ಸ್ವಾಗತ) ನೀಡು; ಕೊಡು.
  11. (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) (ಜಮೀನು ಮೊದಲಾದವಕ್ಕೆ) ಬೆಲೆಕಟ್ಟು; ಬೆಲೆ ನಿರ್ಣಯಿಸು.
  12. (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) (ಜಮೀನು ಮೊದಲಾದವನ್ನು ಸಾಲಕ್ಕಾಗಿ) ಜಫ್ತಿಮಾಡು; ವಶಪಡಿಸಿಕೊ.
  13. (ರೇಖೆಯನ್ನು) ವಿಸ್ತರಿಸು; ಲಂಬಿಸು.
ಅಕರ್ಮಕ ಕ್ರಿಯಾಪದ
  1. (ಸ್ಥಳ ಮೊದಲಾದವುಗಳ ವಿಷಯದಲ್ಲಿ) ಮುಟ್ಟು; ತಲುಪು; ನಿಲುಕು; ಹಾಯು; ವ್ಯಾಪಿಸು: extend to that point ಆ ಸ್ಥಾನ ಮುಟ್ಟು. extend over the whole space ಆ ಅವಕಾಶವನ್ನೆಲ್ಲ ವ್ಯಾಪಿಸು.
  2. (ಸೈನಿಕರ ಸಾಲಿನ ವಿಷಯದಲ್ಲಿ) ನಡುನಡುವೆ ಸಮವಾದ ಅಂತರ ಬಿಟ್ಟು ವಿಸ್ತಾರವಾಗು.
  3. (ಕಾಲಾವಧಿ) ಬೆಳೆ; ಲಂಬಿಸು; ವಿಸ್ತರಿಸು.
  4. (ಉದ್ದ, ಕ್ಷೇತ್ರ, ಅವಕಾಶ, ಮೊದಲಾದವುಗಳ ವಿಷಯದಲ್ಲಿ) ಹೆಚ್ಚು; ಹಿಗ್ಗು; ದೊಡ್ಡದಾಗು; ವಿಶಾಲವಾಗು.