expunge ಇ(ಎ)ಕ್ಸ್‍ಪಂಜ್‍
ಸಕರ್ಮಕ ಕ್ರಿಯಾಪದ
  1. (ಪಟ್ಟಿಯಿಂದ ಹೆಸರನ್ನು, ಪುಸ್ತಕ ಮೊದಲಾದವುಗಳಿಂದ ಗ್ರಂಥಭಾಗವನ್ನು) ಅಳಿಸು; ತೆಗೆ; ತೊಡೆದುಹಾಕು; ತೆಗೆದುಹಾಕು; ಬಿಟ್ಟುಬಿಡು: these words were ordered by the court to be expunged ಈ ಪದಗಳನ್ನು ತೆಗೆದುಹಾಕಬೇಕೆಂದು ನ್ಯಾಯಸ್ಥಾನದಿಂದ ಆಜ್ಞೆಯಾಯಿತು.
  2. ನಾಶಮಾಡು; ಹಾಳುಮಾಡು; ನಿರ್ನಾಮಮಾಡು; ನಿಶ್ಯೇಷಮಾಡು; ಧ್ವಂಸಮಾಡು: the nuclear explosives can expunge civilization ಬೈಜಿಕ ಸ್ಫೋಟಗಳು ನಾಗರಿಕತೆಯನ್ನು ನಾಶಮಾಡಬಲ್ಲವು.