expropriate ಎಕ್ಸ್‍ಪ್ರೋಪ್ರಿಏಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಯಾ ವ್ಯಕ್ತಿಗಳಿಗೆ, ಆಸ್ತಿ ಮೊದಲಾದವುಗಳ) ಸ್ವಾಧೀನ ತಪ್ಪಿಸು; ಒಡೆತನ ತಪ್ಪಿಸು: the revolutionary government expropriated the landowners from their estates ಕ್ರಾಂತಿಕಾರಿ ಸರ್ಕಾರ ಜಮೀನುದಾರರಿಗೆ ಅವರ ಆಸ್ತಿಪಾಸ್ತಿಗಳ ಒಡೆತನವನ್ನು ತಪ್ಪಿಸಿತು.
  2. (ಸ್ವತ್ತನ್ನು) ಕಿತ್ತುಕೊ; ವಶಪಡಿಸಿಕೊ; ಕಸಿದುಕೊ.
  3. ತೆಗೆದುಕೊ; ಇನ್ನೊಬ್ಬನಿಗೆ ಸೇರಿದ್ದನ್ನು ಸ್ವಂತ ಉಪಯೋಗಕ್ಕೆ ತೆಗೆದುಕೊ, ಬಳಸಿಕೊ: he expropriated my ideas for his article ಅವನ ಲೇಖನಕ್ಕೆ ನನ್ನ ಕಲ್ಪನೆಗಳನ್ನು ಬಳಸಿಕೊಂಡನು.