expressionism ಇ(ಎ)ಕ್ಸ್‍ಪ್ರೆಷನಿಸಮ್‍
ನಾಮವಾಚಕ
  1. ಅಭಿವ್ಯಕ್ತಿವಾದ; ಅಭಿವ್ಯಕ್ತಿಪಂಥ; ವಾಸ್ತವಿಕತೆಗೆ ಪ್ರಾಶಸ್ತ್ಯನೀಡದೆ, ಕಲಾವಿದನ ಯಾ ಪಾತ್ರದ ಆಂತರಿಕ ಅನುಭವವನ್ನು ಸಾಂಕೇತಿಕ ಯಾ ಶೈಲಿಪ್ರಧಾನ ಅಭಿವ್ಯಕ್ತಿಯ ಮೂಲಕ ನಿರೂಪಿಸುವುದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವ ಆಧುನಿಕ ಸಂಗೀತ, ನಾಟಕ, ನಾಟ್ಯ ಹಾಗೂ ಚಿತ್ರ ಕಲಾಪಂಥ.
  2. (ಸಂಗೀತ) ಆತ್ಮಾಭಿವ್ಯಕ್ತಿ ಸ್ವಾತಂತ್ರ್ಯ; ನಿಯಮಗಳನ್ನು ತೊಡೆದುಹಾಕಿ ವಾಗ್ಗೇಯಕಾರನ ಆತ್ಮಾಭಿವ್ಯಕ್ತಿಗೆ ಪೂರ್ಣಸ್ವಾತಂತ್ರ್ಯ ದೊರಕಿಸುವ ಪ್ರವೃತ್ತಿ.