expression ಇ(ಎ)ಕ್ಸ್‍ಪ್ರೆಷನ್‍
ನಾಮವಾಚಕ
  1. (ರಸವನ್ನು, ಗಾಳಿಯನ್ನು) ಹಿಂಡುವಿಕೆ; ಹಿದುಕುವಿಕೆ.
  2. ಹೊರಸೂಸುವಿಕೆ; ಹೊರಸುರಿಸಿಕೆ; ಹೊರಬಿಡುವಿಕೆ, ಚೆಲ್ಲುವಿಕೆ.
  3. (ಗಣಿತ) (ನಿರ್ದಿಷ್ಟ ಪರಿಮಾಣಗಳಲ್ಲಿ) ನಿರೂಪಣೆ; ನಿರೂಪಿಸುವುದು.
  4. (ಭಾವನೆಗಳ, ಗುಣಗಳ) ಹೊರಗೆಡತ; ಪ್ರಕಟಣೆ; ಅಭಿವ್ಯಕ್ತಿ.
  5. ನುಡಿಯುವುದು; ಹೇಳಿಕೆ; ಮಾತಿನಲ್ಲಿ ತಿಳಿಯಪಡಿಸುವಿಕೆ; ಮಾತಿನಲ್ಲಿ ವ್ಯಕ್ತಪಡಿಸುವುದು.
  6. ಪದಪ್ರಯೋಗ; ಪದವಿನ್ಯಾಸ; ಮಾತಿನ ಜೋಡಣೆ; ವಾಕ್ಸರಣಿ; ಹೇಳುವ ರೀತಿ: slang expressions should be avoided in an essay ಪ್ರಬಂಧದಲ್ಲಿ ಅಶಿಷ್ಟ ಪದಪ್ರಯೋಗಗಳನ್ನು ಬಿಡಬೇಕು.
  7. ಪದ; ಶಬ್ದ; ಪದಗುಚ್ಛ.
  8. ಪದಶಕ್ತಿ; ಶಬ್ದಶಕ್ತಿ; ಪದಗಳ ಯಾ ಮಾತಿನ ಮೂಲಕ ಅಭಿವ್ಯಕ್ತಿಗೊಳಿಸುವ ಶಕ್ತಿ: misery beyond expression ಮಾತಿಗೆ ಯಾ ಪದಗಳಿಗೆ ಮೀರಿದ ಸಂಕಟ.
  9. (ಬೀಜಗಣಿತ) ಉಕ್ತಿ; ಯಾವುದೇ ಪರಿಮಾಣವನ್ನು ಸೂಚಿಸಲು ಬಳಸುವ ಬೀಜಗಣಿತ ಸಂಕೇತಗಳ ಒಂದು ಸಮೂಹ.
  10. (ಮುಖ್ಯವಾಗಿ ಭಾವವನ್ನು ಸೂಚಿಸುವ) ಮುಖಭಾವ; ಮುಖಭಂಗಿ: she could not understand the expression in his face ಅವನ ಮುಖಭಾವವನ್ನು ಅವಳು ಅರ್ಥಮಾಡಿಕೊಳ್ಳದೆ ಹೋದಳು.
  11. (ಮುಖ್ಯವಾಗಿ ಭಾವವನ್ನು ಸೂಚಿಸುವ) (ಕಂಠದ) ಧ್ವನಿ; ಏರಿಳಿತ; ಉಚ್ಚಾರರೀತಿ.
  12. ಅಭಿವ್ಯಕ್ತಿ; ವ್ಯಂಜನೆ; ಶೀಲ, ಗುಣ, ಭಾವ, ಮೊದಲಾದವನ್ನು ನಿರೂಪಿಸಿದ ರೀತಿ.
  13. (ಸಂಗೀತ) ಭಾವವ್ಯಂಜಕ ಯಾ ಭಾವಪೂರ್ಣವಾದನ ಯಾ ಗಾಯನ; ಗೀತಭಾಗದ ರಸವನ್ನು ವ್ಯಕ್ತಪಡಿಸುವಂಥ ಹಾಡುಗಾರಿಕೆ ಯಾ ವಾದನ.
  14. (ಕಲೆ) ಭಂಗಿ; ಕಾರ್ಯ ಮೊದಲಾದವನ್ನು ಅಭಿವ್ಯಕ್ತಿಗೊಳಿಸುವ ರೀತಿ.
  15. (ಭಾಷಾಶಾಸ್ತ್ರ) ಉಕ್ತಿಯ (ಅರ್ಥಕ್ಕೆ ಸಂಬಂಧಿಸಿದ) ಭಾಷಿಕ ಯಾ ಶೈಲಿಯ ಗುಣಗಳು.