exposure ಇ(ಎ)ಕ್ಸ್‍ಪೋಷರ್‍
ನಾಮವಾಚಕ
  1. (ಗಾಳಿ, ಶೀತ, ಅಪಾಯ, ಮೊದಲಾದವಕ್ಕೆ) ಒಡ್ಡುವುದು; ಒಡ್ಡಿರುವುದು; ಒಡ್ಡಲ್ಪಡುವುದು; ತೆರೆತ; ತೆರೆದಿಡು; ತೆರೆದಿಡುವುದು; ತೆರೆದಿಡಲ್ಪಡುವಿಕೆ: exposure of the body to strong sunlight may be harmful ತೀಕ್ಷ್ಣಬಿಸಿಲಿಗೆ ಮೈಯನ್ನು ಒಡ್ಡುವುದು ಅಪಾಯಕರವಾಗಬಹುದು.
  2. (ಚರಿತ್ರೆ) (ಕೂಸನ್ನು) ಹೊರಗೆ ಬಿಡುವುದು; ತೊರೆದುಬಿಡುವುದು; ತ್ಯಜಿಸುವುದು.
  3. (ಮುಖ್ಯವಾಗಿ ಮಾರಾಟದ ವಸ್ತುಗಳ) ಪ್ರದರ್ಶನ.
  4. (ಠಕ್ಕು, ಮೋಸ, ಕಪಟ, ಮೊದಲಾದವನ್ನು) ಬಯಲುಮಾಡುವುದು; ಬಹಿರಂಗಗೊಳಿಸುವುದು; ಬಯಲಾಗುವಿಕೆ; ಹೊರಗೆಡಹಿಕೆ; ಪ್ರಕಟಪಡಿಸುವಿಕೆ.
  5. ಮುಖ; ದಿಕ್ಕು; ಕಡೆ; ದೆಸೆ; ದೃಷ್ಟಿ: a house with a southern exposure ದಕ್ಷಿಣಾಭಿಮುಖ ಮನೆ; ದಕ್ಷಿಣದ ಕಡೆಗಿರುವ ಮನೆ.
  6. (ಛಾಯಾಚಿತ್ರಣ) (ಹಿಲಮಿನ ವಿಷಯದಲ್ಲಿ, ಬೆಳಕಿಗೆ)
    1. ಒಡ್ಡಿಕೆ; ಒಡ್ಡಣೆ.
    2. ಒಡ್ಡಣೆಯ ಕಾಲ.
    3. ಹಾಗೆ ಒಡ್ಡಿರುವ ಜಾಗ, ಭಾಗ.
ಪದಗುಚ್ಛ
  1. exposure meter ಒಡ್ಡಣೆಮಾಪಕ; ಹಿಲ್ಮ್‍ ಮೊದಲಾದವನ್ನು ಎಷ್ಟುಕಾಲ ಬೆಳಕಿಗೆ ಒಡ್ಡಬೇಕೆನ್ನುವುದನ್ನು ಸೂಚಿಸುವ ಸಾಧನ, ಸಲಕರಣೆ.
  2. indecent exposure ಅಶ್ಲೀಲ ಪ್ರದರ್ಶನ; ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ಅಂಗಾಂಗಗಳನ್ನು ತೋರಿಸುವುದು.