exposition ಎಕ್ಸ್‍ಪಸಿಷನ್‍
ನಾಮವಾಚಕ
  1. (ಕವಿತೆ, ಸಾಹಿತ್ಯಕೃತಿ, ಅಭಿಪ್ರಾಯ, ಮೊದಲಾದವುಗಳ) ಪ್ರತಿಪಾದನೆ; ನಿರೂಪಣೆ; ವರ್ಣನೆ: the exposition of a point of view ಒಂದು ದೃಷ್ಟಿಯ ನಿರೂಪಣೆ.
  2. ವಿವರಣೆ; ಸ್ಪಷ್ಟೀಕರಣ.
  3. ವ್ಯಾಖ್ಯಾನ; ಭಾಷ್ಯ; ಟೀಕೆ.
  4. (ಪ್ರಾಚೀನ ಪ್ರಯೋಗ) = exposure(1).
  5. (ಪ್ರಾಚೀನ ಪ್ರಯೋಗ) = exposure(2).
  6. (ಸರಕು ಮೊದಲಾದವುಗಳ) ಪ್ರದರ್ಶನ: an industrial exposition ಕೈಗಾರಿಕಾಪ್ರದರ್ಶನ.
  7. (ಸಂಗೀತ) ಪ್ರಧಾನ ಸ್ವರಸಂಗತಿಗಳ ಗಾಯನ ಯಾ ವಾದನ.