See also 2exploit
1exploit ಎಕ್ಸ್‍ಪ್ಲಾಯ್ಟ್‍
ನಾಮವಾಚಕ

ಸಾಹಸಕಾರ್ಯ; ವೀರಕೃತ್ಯ; ಯಶಸ್ವಿಯಾದ ಕಾರ್ಯಸಿದ್ಧಿ.

See also 1exploit
2exploit ಎಕ್ಸ್‍ಪ್ಲಾಯ್ಟ್‍
ಸಕರ್ಮಕ ಕ್ರಿಯಾಪದ
  1. (ಗಣಿ, ಕಾಡು, ಮೊದಲಾದವನ್ನು) ಉಪಯೋಗಕ್ಕೆ ಬರುವಂತೆ ಮಾಡು; ಕಾರ್ಯರೂಪಕ್ಕೆ ತರು; ಬಳಸಿಕೊ; ಉಪಯೋಗಿಸು: exploit the mineral resources (ನಿಕ್ಷೇಪವಾದ) ಖನಿಜಸಂಪತ್ತನ್ನು ಉಪಯೋಗಕ್ಕೆ ಬರುವಂತೆ ಮಾಡು.
  2. (ಮುಖ್ಯವಾಗಿ ನಿಂದಾರ್ಥದಲ್ಲಿ) (ವ್ಯಕ್ತಿ ಮೊದಲಾದವರನ್ನು) ಶೋಷಿಸು; ದೋಚು; ದುಡಿಸಿಕೊ; ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊ; ಇನ್ನೊಬ್ಬರ ದುಡಿಮೆಯಿಂದ ಲಾಭಗಳಿಸು, ಪ್ರಯೋಜನ ಪಡೆ: exploiting colonial possessions ವಸಾಹತು ಪ್ರದೇಶಗಳನ್ನು ಶೋಷಣೆಮಾಡುತ್ತ.