explode ಇ(ಎ)ಕ್ಸ್‍ಪ್ಲೋಡ್‍
ಸಕರ್ಮಕ ಕ್ರಿಯಾಪದ
  1. (ತತ್ತ್ವ, ತಪ್ಪು ಅಭಿಪ್ರಾಯ, ಮೊದಲಾದವನ್ನು ನಿರಾಧಾರವೆಂದು) ಖಂಡಿಸು; ಹಾರಿಸಿಬಿಡು; ನಿರಾಕರಿಸು: to explode a theory ಒಂದು ವಾದವನ್ನು ಖಂಡಿಸು.
  2. ಸಿಡಿಸು; ಸ್ಫೋಟಿಸು; ಸಿಡಿಯುವಂತೆ, ಸ್ಫೋಟನವಾಗುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. (ಅನಿಲ, ಕೋವಿಯ ಮದ್ದು, ಎಂಜಿನಿನ ಕುದಿಪಾತ್ರೆ, ಮೊದಲಾದವು) ಸಿಡಿ; ಸ್ಫೋಟಿಸು; ದೊಡ್ಡ ಶಬ್ದದೊಡನೆ ಸಿಡಿದುಹೋಗು.
  2. (ಕೋಪ, ಮುಂತಾದ ಭಾವೋದ್ರೇಕಗಳಿಂದ ತುಂಬಿ) ಸಿಡಿದು ಬೀಳು; ಉರಿದುಬೀಳು: explode with laughter ನಗು ತಡೆಯಲಾರದೆ ಹೋಗು; ಫಕ್ಕನೆ ನಗು; ಘೊಳ್ಳೆಂದು ನಗು.
  3. (ಗಾಲ್‍ ಆಟದಲ್ಲಿ) (ಮರಳಿನ ನಡುವೆ ಹೂತುಕೊಂಡ) ಚೆಂಡನ್ನು (ಶಬ್ದವಾಗುವಂತೆ) ಹೊಡೆ.
ಪದಗುಚ್ಛ
  1. exploded view ಸ್ಫೋಟಿತ ದೃಶ್ಯ; ಯಂತ್ರ ಮೊದಲಾದವುಗಳ ವಿವಿಧ ಭಾಗಗಳು ಸ್ಫೋಟಗೊಂಡು ಬಿಡಿಬಿಡಿಯಾಗಿ ಬೇರ್ಪಟ್ಟಂತೆ, ಆದರೆ ಅವುಗಳ ಪರಸ್ಪರ ಸಂಬಂಧ ಮೊದಲ ರೀತಿಯಲ್ಲೇ ಇರುವಂತೆ ತೋರಿಸುವ ನಕ್ಷೆ, ಚಿತ್ರ, ಮೊದಲಾದವು.
  2. magneto exploder ಕಾಂತೀಯ ಸ್ಫೋಟಕ; ಕಾಂತ ಸ್ಫೋಟಕಗಳನ್ನು ಸಿಡಿಸುವ, ಕೈಯಲ್ಲಿ ಒಯ್ಯಬಲ್ಲ ವಿದ್ಯುದುಪಕರಣ.