See also 2explicit
1explicit ಇಕ್ಸ್‍ಪ್ಲಿಸಿಟ್‍
ನಾಮವಾಚಕ
  1. (ಪುಸ್ತಕ ಮೊದಲಾದವುಗಳ) ಇತಿಶ್ರೀ; ಕೊನೆಯ ಮಾತುಗಳು; ಅಂತ್ಯ ಸೂಕ್ತಿಗಳು.
  2. (ರೂಪಕವಾಗಿ) ಸಮಾಪ್ತಿ; ಮುಕ್ತಾಯ.
See also 1explicit
2explicit ಇಕ್ಸ್‍ಪ್ಲಿಸಿಟ್‍
ಗುಣವಾಚಕ
  1. (ಊಹೆಗೆ ಸ್ವಲ್ಪವೂ ಬಿಡದೆ ವಿಶದವಾಗಿ) ಹೇಳಿದ; ಪ್ರಕಟ; ವ್ಯಕ್ತ.
  2. ಸುಸ್ಪಷ್ಟ; ಸುವ್ಯಕ್ತ; ಖಚಿತ; ನಿಷ್ಕೃಷ್ಟ.
  3. (ಮನುಷ್ಯರು, ಪುಸ್ತಕ, ಮೊದಲಾದವುಗಳ ವಿಷಯದಲ್ಲಿ) ಮುಚ್ಚುಮರೆಯಿಲ್ಲದ; ನೇರಮಾತಿನ; ಬಿಚ್ಚುನುಡಿಯ.
  4. (ಗಣಿತ) (ಘನದ ವಿಷಯದಲ್ಲಿ) ಸ್ಪಷ್ಟ; ಪರತಂತ್ರ ಚರದ ಮೌಲ್ಯವನ್ನು ನೇರವಾಗಿ ಸ್ವತಂತ್ರ ಚರಗಳನ್ನುಪಯೋಗಿಸಿ ನಿರೂಪಿಸಿರುವ.
  5. ನೇರವಾಗಿ ತೆರಬೇಕಾದ; ನಗದು (ಹಣ) ರೂಪದಲ್ಲಿ ಕೊಡಬೇಕಾದ: explicit rent ನಗದು ಕೊಡುವ ಬಾಡಿಗೆ ಹಣ.
ಪದಗುಚ್ಛ

explicit faith ಸ್ಪಷ್ಟಶ್ರದ್ಧೆ; ಜ್ಞಾನಪೂರ್ವಕ ನಂಬಿಕೆ; ಒಂದು ತತ್ತ್ವದ ಪೂರ್ವೋತ್ತರಗಳನ್ನು ಸ್ಪಷ್ಟವಾಗಿ ತಿಳಿದು ಅದನ್ನು ನಂಬುವುದು.