explain ಇ(ಎ)ಕ್ಸ್‍ಪ್ಲೇನ್‍
ಸಕರ್ಮಕ ಕ್ರಿಯಾಪದ
  1. (ವಸ್ತು, ವಿವರ, ಮೊದಲಾದವನ್ನು) ವಿವರಿಸು; ವಿಶದವಾಗಿ ಹೇಳು.
  2. (ಅರ್ಥ, ತೊಂದರೆ, ಮೊದಲಾದವನ್ನು) ಸ್ಪಷ್ಟಮಾಡು; ಸ್ಪಷ್ಟೀಕರಿಸು; ಸ್ಪಷ್ಟಪಡಿಸು; ಬಿಡಿಸಿ ಹೇಳು.
  3. (ನಡವಳಿಕೆ ಮೊದಲಾದವನ್ನು ಕುರಿತು) ವಿವರಣೆನೀಡು; ಸಮಜಾಯಿಷಿ ಕೊಡು; ಸಮಾಧಾನ ನೀಡು: I cannot explain your untoward behaviour ನಿನ್ನ ಅನುಚಿತ ನಡವಳಿಕೆ ಬಗ್ಗೆ ನಾನು ಏನೊಂದೂ ಸಮಜಾಯಿಷಿ ನೀಡಲಾರೆ.
ಅಕರ್ಮಕ ಕ್ರಿಯಾಪದ

ವಿವರಣೆ ನೀಡು; ಸಮಜಾಯಿಷಿ ಕೊಡು; ಕಾರಣ ತಿಳಿಸು.

ನುಡಿಗಟ್ಟು
  1. explain away (ಮುಖ್ಯವಾಗಿ ಅಸಮಾಧಾನ ಹುಟ್ಟುವಂತೆ ಹೇಳಿದುದನ್ನು, ಅಹಿತವೆನಿಸುವ ಮಾತನ್ನು, ಸಮಾಧಾನ ಹೇಳಿ) ತಿದ್ದಿ ತೇಲಿಸಿ ಬಿಡು.
  2. explain oneself
    1. ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸು.
    2. ತನ್ನ ವರ್ತನೆಗೆ — ಕಾರಣ ನೀಡು, ಸಮಾಧಾನ ಹೇಳು, ಸಮಜಾಯಿಷಿ ಕೊಡು.
    3. ತನ್ನ ಉದ್ದೇಶ ವಿವರಿಸು.