expire ಇ(ಎ)ಕ್ಸ್‍ಪೈಅರ್‍
ಸಕರ್ಮಕ ಕ್ರಿಯಾಪದ

(ಶ್ವಾಸಕೋಶದಿಂದ ಗಾಳಿಯನ್ನು) ನಿಶ್ವಸಿಸು; ಹೊರಕ್ಕೆ ಬಿಡು.

ಅಕರ್ಮಕ ಕ್ರಿಯಾಪದ
  1. ಸಾಯಿ; ಪ್ರಾಣಬಿಡು; ಕೊನೆಯುಸಿರು ಎಳೆ, ಬಿಡು; ತೀರಿಹೋಗು.
  2. (ಬೆಂಕಿ ಮೊದಲಾದವುಗಳ ವಿಷಯದಲ್ಲಿ) ನಂದಿಹೋಗು; ಆರಿಹೋಗು.
  3. (ಕಾಲದ ಅವಧಿಯ ವಿಷಯದಲ್ಲಿ) ಕೊನೆಗಾಣು; ಮುಗಿದುಹೋಗು.
  4. (ಕಾನೂನಿನ, ಸ್ವಾಮ್ಯದ, ಅಧಿಕಾರದ, ಕದನವಿರಾಮದ ಕಾಲಾವಧಿ) ತೀರಿಹೋಗು; ವಾಯಿದೆ ಮುಗಿದು ಹೋಗು.
  5. (ಹಕ್ಕು, ವಾರಸು, ಮೊದಲಾದವು) ಅಂತ್ಯವಾಗು; ನಿಂತು ಹೋಗು.