See also 2experience
1experience ಇ(ಎ)ಕ್ಸ್‍ಪಿಅರಿಅನ್ಸ್‍
ನಾಮವಾಚಕ
  1. (ವಿಷಯಗಳ ಯಾ ಘಟನೆಗಳ) ಪ್ರತ್ಯಕ್ಷ ಅನುಭವ; ಸಾಕ್ಷಾದನುಭವ; ವಸ್ತುಗಳ ಯಾ ಘಟನೆಗಳ ನೇರದರ್ಶನ ಯಾ ಪರಿಚಯ.
  2. ಅನುಭವಜನ್ಯಜ್ಞಾನ.
  3. ವ್ಯವಹಾರಜ್ಞಾನ.
  4. (ಒಬ್ಬನಿಗೆ ಉಂಟಾಗುವ ವಿಶಿಷ್ಟ) ಅನುಭವ: an unpleasant experience ಅಹಿತಕರ ಅನುಭವ.
  5. (ಕೆಲಸಮಾಡಿ ಪಡೆದುಕೊಂಡ ನೇರ) ಅನುಭವ; ಪರಿಶ್ರಮ; ತಿಳಿವಳಿಕೆ; ಮನಗಾಣ್ಕೆ: I learnt by experience ಅನುಭವದ ಮೂಲಕ ಕಲಿತುಕೊಂಡೆ.
  6. ಆಂತರಿಕ ಅನುಭವ; ಅಂತರಂಗದ ಅನುಭವ; ಆಧ್ಯಾತ್ಮಿಕ ಅನುಭವ.
ಪದಗುಚ್ಛ

experience table ಆಯುರ್ದಾಯದ ಪಟ್ಟಿ; ಬೇರೆಬೇರೆ ವಯಸ್ಸುಗಳಲ್ಲಿ ಜನರು ಮುಂದೆ ಎಷ್ಟು ಕಾಲ ಬದುಕಬಹುದೆಂದು ಜೀವವಿಮಾಸಂಸ್ಥೆಗಳು ತಮ್ಮ ಅನುಭವದ ನಿರೀಕ್ಷಣೆಯಿಂದ ತಯಾರಿಸಿದ ಪಟ್ಟಿ.

See also 1experience
2experience ಇ(ಎ)ಕ್ಸ್‍ಪಿಅರಿಅನ್ಸ್‍
ಸಕರ್ಮಕ ಕ್ರಿಯಾಪದ
  1. (ಸಂತೋಷ, ಆದರ, ಅದೃಷ್ಟ, ಮೊದಲಾದವನ್ನು) ಅನುಭವಿಸು; ಪಡೆ.
  2. ಮನಗಾಣು; ತಿಳಿದುಕೊ; ಕಂಡುಕೊ.
ನುಡಿಗಟ್ಟು

experience religion ಮತ ಯಾ ಧರ್ಮಕ್ಕೆ ಪರಿವರ್ತನೆಗೊಳ್ಳು.