expense ಇ(ಎ)ಕ್ಸ್‍ಪೆನ್ಸ್‍
ನಾಮವಾಚಕ
  1. = expenditure.
  2. (ಯಾವುದಕ್ಕಾದರೂ ತೆರಬೇಕಾದ) ಬೆಲೆ; ಮೌಲ್ಯ.
  3. (ಬಹುವಚನದಲ್ಲಿ) (ಕೆಲಸ ಮೊದಲಾದವಕ್ಕೆ ತಗಲುವ ಯಾ ತಗಲಿದ) ಖರ್ಚುವೆಚ್ಚಗಳು: he paid my expenses ಅವನು ನನ್ನ ಖರ್ಚುವಚ್ಚವೆಲ್ಲವನ್ನು ತೆತ್ತ.
ಪದಗುಚ್ಛ
  1. a laugh at his expense ಅವನನ್ನು ನೋಡಿ ನಕ್ಕ ನಗು; ಅವನನ್ನು ಕುರಿತ ಅಪಹಾಸ್ಯ.
  2. at the expense of
    1. ವೆಚ್ಚದಲ್ಲಿ; ಖರ್ಚಿನಲ್ಲಿ.
    2. (ರೂಪಕವಾಗಿ) ವ್ಯಕ್ತಿಗೆ ಯಾ ವಸ್ತುವಿಗೆ ನಷ್ಟ, ತೊಂದರೆ, ಅವಮಾನ, ಮೊದಲಾದವನ್ನುಂಟುಮಾಡಿ: you defend his veracity at the expense of his understanding ಅವನು ಸತ್ಯವಂತನೆಂದು ಸಮರ್ಥಿಸುವ ಪ್ರಯತ್ನದಲ್ಲಿ ಅವನ ತಿಳಿವಳಿಕೆಗೆ ಕುಂದು ತರುತ್ತಿದ್ದೀಯೆ.
  3. go to the expense of (ಒಂದರ ಮೇಲೆ) ಹಣ ಖರ್ಚು ಮಾಡು.
  4. put to expense ಹಣ ಖರ್ಚು ಮಾಡಿಸು.