See also 2expedient
1expedient ಇ(ಎ)ಕ್ಸ್‍ಪೀಡಿಅಂಟ್‍
ಗುಣವಾಚಕ
  1. ಅನುಕೂಲವಾದ; ತಕ್ಕ; ಯುಕ್ತ; ಉಚಿತ; ಯಥೋಚಿತ; ವಿಹಿತ: do whatever is expedient ಉಚಿತವಾದುದನ್ನು ಮಾಡು. it is expedient that he should go ಅವನು ಹೋಗತಕ್ಕದ್ದು ವಿಹಿತ.
  2. ಸಮಯೋಚಿತ; ಸಮಯಾನುಕೂಲದ; ಸಮಯಸಾಧಕ; ನ್ಯಾಯಮಾರ್ಗಕ್ಕಿಂತಲೂ ಅನುಕೂಲಕ್ಕೆ ಹೆಚ್ಚು ಗಮನಕೊಟ್ಟು ನಡೆಯುವವ.
See also 1expedient
2expedient ಇ(ಎ)ಕ್ಸ್‍ಪೀಡಿಅಂಟ್‍
ನಾಮವಾಚಕ
  1. ಸಾಧನ; ಸಲಕರಣೆ: aspirin is a useful expedient for dulling minor pain ಅಲ್ಪಸ್ವಲ್ಪದ ನೋವನ್ನು ಶಮನಗೊಳಿಸಲು ಆಸ್ಪಿರಿನ್‍ ಒಂದು ಉಪಯುಕ್ತ ಸಾಧನ.
  2. (ಉದ್ದೇಶ ಸಾಧನೆಗೆ ಬಳಸುವ) ಉಪಾಯ; ಯುಕ್ತಿ; ಹೂಟ; ಹಂಚಿಕೆ: you will have to use some expedient to get over the obstacles in your way ನಿನ್ನ ದಾರಿಯ ಅಡಚಣೆಗಳನ್ನು ನಿವಾರಿಸಲು ನೀನು ಯಾವುದಾದರೂ ಉಪಾಯವನ್ನು ಉಪಯೋಗಿಸಬೇಕಾಗುತ್ತದೆ.