expectation ಎಕ್ಸ್‍ಪೆಕ್ಟೇಷನ್‍
ನಾಮವಾಚಕ
  1. ಕಾದಿರುವುದು; ಕಾಯುತ್ತಿರುವುದು; ಎದುರುನೋಡುವುದು; ಎದುರು ನೋಡುತ್ತಿರುವುದು.
  2. ನಿರೀಕ್ಷೆ; ಪ್ರತೀಕ್ಷೆ; ನಿರೀಕ್ಷಣ: beyond expectation ನಿರೀಕ್ಷೆಗೆ ಮೀರಿ. contrary to expectation ನಿರೀಕ್ಷೆಗೆ ವಿರುದ್ಧವಾಗಿ.
  3. ನಿರೀಕ್ಷೆಗೆ ಆಧಾರ.
  4. (ಬಹುವಚನದಲ್ಲಿ) ಆಸ್ತಿಪ್ರತೀಕ್ಷೆ; ಆಸ್ತಿ ನಿರೀಕ್ಷೆ; ಆಸ್ತಿ ತನಗೆ ಬರುವುದೆಂಬ ಆಶೆ; ಆಸ್ತಿ ತನಗೆ ಬರುವ ಸಂಭವ, ಅವಕಾಶ, ನಿರೀಕ್ಷಣೆ.
  5. ನಿರೀಕ್ಷಿಸಿದ ವಸ್ತು ಯಾ ವಿಷಯ; ನಿರೀಕ್ಷಿಸಿದ್ದು; ನಿರೀಕ್ಷಿತವಾದದ್ದು.
  6. (ಯಾವುದೇ ವಿಷಯ ನಡೆಯುವ) ಸಂಭವ.
ಪದಗುಚ್ಛ

expectation of life ಆಯುರ್ದಾಯ; ಅಯುರ್ಮಾನ; ಯಾವುದೇ ವಯಸ್ಸಿನಲ್ಲಿ ಒಬ್ಬ ಮನುಷ್ಯ ಅಲ್ಲಿಂದ ಮುಂದೆ ಬದುಕುವನೆಂದು ನಿರೀಕ್ಷಿಸಬಹುದಾದ ಅವಧಿ.