expansive ಇ(ಎ)ಕ್ಸ್‍ಪ್ಯಾನ್ಸಿವ್‍
ಗುಣವಾಚಕ
  1. ವಿಸ್ತಾರ ಮಾಡಬಲ್ಲ; ವಿಕಾಸ ಮಾಡಬಲ್ಲ; ವಿಸ್ತಾರವಾಗಬಲ್ಲ; ವಿಸ್ತರಣಶಕ್ಯ; ವಿಕಸನಸಾಧ್ಯ.
  2. ವಿಸ್ತರಣ ಪ್ರವೃತ್ತಿಯ; ವಿಕಸನಶೀಲ.
  3. ಹರಡಿಕೊಂಡಿರುವ; ಹಬ್ಬಿಕೊಂಡಿರುವ; ವಿಸ್ತಾರವಾಗಿರುವ; ವಿಶಾಲವಾಗಿರುವ.
  4. ವ್ಯಾಪಿಸಿಕೊಂಡಿರುವ; ವ್ಯಾಪಕವಾದ.
  5. (ಮನುಷ್ಯರ ವಿಷಯದಲ್ಲಿ) ಉಲ್ಲಾಸ ಪ್ರಕೃತಿಯ; ಗೆಲುವಿನಿಂದ ಕೂಡಿದ, ತುಂಬಿದ; ಪ್ರಸನ್ನ ಮನೋವೃತ್ತಿಯ; ಹಿಗ್ಗುಹೃದಯದ.
  6. ನಿಸ್ಸಂಕೋಚದ ಸ್ವಭಾವದ; ತೆರೆದೆದೆಯ; ತೆರೆದ ಹೃದಯದ: she could be suddenly expansive ಆಕೆ ಇದ್ದಕ್ಕಿದ್ದಂತೆ ನಿಸ್ಸಂಕೋಚವಾಗಿ ವರ್ತಿಸಬಲ್ಲವಳಾಗಿದ್ದಳು.
  7. (ಭಾವಗಳ ವಿಷಯದಲ್ಲಿ) ಉಕ್ಕೇರುವ; ಉಕ್ಕಿಬರುವ: expansive feelings ಉಕ್ಕಿಬರುವ ಭಾವಗಳು.
  8. (ಭಾಷಣದ ವಿಷಯದಲ್ಲಿ) ಹೃತ್ಪೂರ್ವಕವಾದ; ತುಂಬೆದೆಯ; ಉದಾರ ಹೃದಯದ; ತುಂಬುಮನದ; ಧಾರಾಳವಾದ: expansive utterance ಹೃತ್ಪೂರ್ವಕವಾದ ಯಾ ಧಾರಾಳವಾದ ಭಾಷಣ.