expansion ಇ(ಎ)ಕ್ಸ್‍ಪ್ಯಾನ್ಷನ್‍
ನಾಮವಾಚಕ
  1. ವಿಸ್ತರಣ; ಹರಡಿಕೆ; ಹರಡುವುದು; ವಿಸ್ತರಿಸುವುದು; ಹರಡಿಕೊಳ್ಳುವುದು.
  2. (ಸಂಗ್ರಹವಾಗಿರುವುದನ್ನು, ಸಂಕ್ಷಿಪ್ತವಾಗಿರುವುದನ್ನು) ಪೂರ್ಣವಾಗಿ ವಿವರಿಸುವುದು; ಸಂಪೂರ್ಣವಾಗಿ ವಿಸ್ತರಿಸಿ ಬರೆಯುವುದು.
  3. ಬೆಳೆಸುವುದು; ದೊಡ್ಡದು ಮಾಡುವುದು; ಬೆಳೆಯುವುದು; ದೊಡ್ಡದಾಗುವುದು.
  4. ವಿಕಸಿಸುವುದು; ವಿಕಾಸವಾಗುವುದು.
  5. ಉಬ್ಬಿಸುವುದು; ಹಿಗ್ಗಿಸುವುದು.
  6. (ರಾಜ್ಯದ ಭೂಭಾಗ ಮೊದಲಾದವುಗಳ) ವಿಸ್ತರಣೆ; ಹೆಚ್ಚಳ.
  7. (ವಾಣಿಜ್ಯ) (ವ್ಯವಹಾರಗಳ) ವಿಸ್ತರಣ; ವರ್ಧನೆ; ಹರಡುವುದು.
  8. (ಭೌತವಿಜ್ಞಾನ) ಹಿಗ್ಗಣೆ; ವಿಸ್ತರಣೆ; ಎಂಜಿನಿನ ಸಿಲಿಂಡರಿನಲ್ಲಿ ಉಗಿಯ ಪ್ರಮಾಣ ಹೆಚ್ಚಾಗುವುದು.
ಪದಗುಚ್ಛ
  1. expansion of territory ಭೂಭಾಗವಿಸ್ತರಣ; ಅನ್ಯದೇಶಕ್ಕೆ ಸೇರಿದ ಭೂಮಿಯನ್ನು ಆಕ್ರಮಿಸಿ ಸ್ವದೇಶದ ಭೂಭಾಗವನ್ನು ವಿಸ್ತರಿಸುವುದು.
  2. expansion of the currency ನಾಣ್ಯ ಚಲಾವಣೆಯ ವಿಸ್ತರಣ.
  3. triple expansion engine ಮುಮ್ಮಡಿ ಹಿಗ್ಗಣೆ ಎಂಜಿನು; ತ್ರಿಗುಣಿತ ವಿಸ್ತರಣೆ ಎಂಜಿನು; ಉಗಿಯು ಮೂರು ಸಿಲಿಂಡರುಗಳ ಮೂಲಕ ಹಾದುಹೋಗುವಂಥ ಎಂಜಿನು.