See also 2exit
1exit ಎಕ್ಸಿ(ಗ್ಸಿ)ಟ್‍
ನಾಮವಾಚಕ
  1. ನಿಷೃಮಣ; ನಿರ್ಗಮನ; ಬಿಟ್ಟು ಹೋಗುವುದು; ಹೊರಟು ಹೋಗುವುದು; ಹೊರಹೋಗುವುದು; ನಟ ಯಾ ನಟಿ ರಂಗದಿಂದ ಹೊರಟು ಹೋಗುವುದು; (ರೂಪಕವಾಗಿ ಸಹ).
  2. ಸಾವು; ಮರಣ.
  3. ಹೊರಕ್ಕೆ ಯಾ ಆಚೆಗೆ ಹೋಗುವುದು.
  4. ಹೊರಕ್ಕೆ ಹೋಗಲು ಸ್ವಾತಂತ್ರ್ಯ ಯಾ ಅವಕಾಶ; ನಿರ್ಗಮನ ಸ್ವಾತಂತ್ರ್ಯ.
  5. ನಿರ್ಗಮನ ಮಾರ್ಗ; ಹೊರಕ್ಕೆ ಹೋಗುವ ದಾರಿ, ಹಾದಿ.
  6. (ಇಸ್ಪೀಟಾಟ) ಮೊದಲ ಇಳಿತವನ್ನು ಉದ್ದೇಶಪೂರ್ವಕವಾಗಿಯೇ ಕಳೆದುಕೊಳ್ಳುವುದು ಯಾ ಹಾಗೆ ಕಳೆದುಕೊಳ್ಳುವ ವಿಧಾನ.
  7. (ಅಮೆರಿಕನ್‍ ಪ್ರಯೋಗ) ನಿರ್ಗಮದಾಣ; ವಾಹನಗಳು ಮೋಟಾರುವಾಹನದ ಹಾದಿ ಮೊದಲಾದವನ್ನು ಬಿಟ್ಟು ಹೋಗಬುದುದಾದ ಜಾಗ.
ಪದಗುಚ್ಛ

exit permit (or visa) ನಿರ್ಗಮನ — ರಹದಾರಿ, ವೀಸಾ; ಒಂದು ನಿರ್ದಿಷ್ಟ ದೇಶವನ್ನು ಬಿಟ್ಟು ಹೊರಹೋಗಲು ಒಬ್ಬ ವ್ಯಕ್ತಿಗೆ ಕೊಡುವ ರಹದಾರಿ ಯಾ ವೀಸಾ.

See also 1exit
2exit ಎಕ್ಸಿ(ಗ್ಸಿ)ಟ್‍
ಅಕರ್ಮಕ ಕ್ರಿಯಾಪದ
  1. (ರಂಗಸ್ಥಳದ ನಿರ್ದೇಶನ) (ನಟ, ರಂಗಬಿಟ್ಟು) ಹೊರಡುತ್ತಾನೆ; ನಿಷ್ಕ್ರಮಿಸುತ್ತಾನೆ (ರೂಪಕವಾಗಿ ಸಹ): Exit Charudatta ಚಾರುದತ್ತ ರಂಗದಿಂದ ಆಚೆ ಹೊರಡುತ್ತಾನೆ.
  2. ನಿರ್ಗಮಿಸು; ನಿಷ್ಕ್ರಮಿಸು; ಹೊರಟುಹೋಗು.
  3. (ಇಸ್ಪೀಟಾಟ) ಉದ್ದೇಶಪೂರ್ವಕವಾಗಿ ಮೊದಲಿಳಿತ ಕಳೆದುಕೊ. ಮೊದಲಿಳಿತ ಇಳಿಯದಿರು.
  4. ಸಾಯು; ಮರಣ ಹೊಂದು: she would become Duchess of Delaware, if old Pomposo would exit ಮುದಿಯ ಪಾಂಪೋಸೊ ಸತ್ತರೆ, ಅವಳು ಡಚೆಸ್‍ ಆಹ್‍ ಡಿಲಾವೇರ್‍ ಆಗುತ್ತಾಳೆ.