existence ಇ(ಎ)ಗ್ಸಿಸ್ಟನ್ಸ್‍
ನಾಮವಾಚಕ
  1. ಇರುವುದು; ಇರುವಿಕೆ; ಇರವು; ಸ್ಥಿತಿ; ಅಸ್ತಿತ್ವ.
  2. (ಮುಖ್ಯವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿನ) ಬದುಕು; ಬಾಳು; ಜೀವನ: a wretched existence ದರಿದ್ರಬಾಳು; ಹಾಳು ಜೀವನ. a precarious existence ಅನಿಶ್ಚಿತ ಜೀವನ; ಅಳಿವು ಉಳಿವುಗಳ ನಡುವೆ ಸದಾ ಅಪಾಯದಲ್ಲೇ ಹೊಯ್ದಾಡುವ ಬಾಳು.
  3. ಇರುವ ರೀತಿ ಯಾ ಸ್ಥಿತಿ.
  4. ಇರುವ ವಸ್ತು; ಅಸ್ತಿತ್ವದಲ್ಲಿರುವ ಪದಾರ್ಥ: natural existences ಪ್ರಕೃತಿಯಲ್ಲಿರುವ ವಸ್ತುಗಳು.
  5. ಸಮಸ್ತ ಅಸ್ತಿತ್ವ; ಇರುವ ಎಲ್ಲವೂ ಯಾ ಸಕಲವೂ.
ಪದಗುಚ್ಛ

in existence ಇರುವ; ಅಸ್ತಿತ್ವದಲ್ಲಿರುವ.