exhaustion ಇ(ಎ)ಗ್‍ಸಾಸ್ಚನ್‍
ನಾಮವಾಚಕ
  1. (ಗಾಳಿ) ತೆಗೆಯುವುದು.
  2. ಪೂರ್ತಿಯಾಗಿ ಉಪಯೋಗಿಸಿಬಿಡುವುದು; ಮುಗಿಸಿಬಿಡುವಿಕೆ; ತೀರಿಸಿಬಿಡುವಿಕೆ.
  3. ಎಲ್ಲವನ್ನೂ ಬಳಸುವುದು; (ಲೆಕ್ಕಹಾಕಿ ಪರಿಶೀಲಿಸಿ) ಮುಗಿಸುವುದು.
  4. (ಪಾತ್ರೆ) ಖಾಲಿ ಮಾಡುವುದು; ಬರಿದುಮಾಡುವುದು.
  5. (ವಿಷಯ ಕುರಿತು) ತಿಳಿಯಬೇಕಾದುದೆಲ್ಲವನ್ನೂ ಹೇಳಿ ಮುಗಿಸುವುದು.
  6. (ವಿಷಯ ಕುರಿತು) ಎಲ್ಲವನ್ನೂ ಕಂಡುಹಿಡಿಯುವುದು; ಬುಡಮುಟ್ಟ ಶೋಧನೆ; ಆದ್ಯಂತ ಶೋಧನೆ.
  7. (ವ್ಯಕ್ತಿ, ರಾಜ್ಯ, ಮೊದಲಾದವುಗಳನ್ನು) ನಿರ್ವೀರ್ಯಗೊಳಿಸುವುದು; ಶಕ್ತಿ, ಸಂಪತ್ತು, ಮೊದಲಾದವನ್ನು ಹೀರಿಹಾಕುವುದು, ಬಸಿದು ಬಿಡುವುದು.
  8. ಬಳಲಿಸಿಕೆ; ಆಯಾಸಪಡಿಸಿಕೆ; ದಣಿಸಿಕೆ; ಸುಸ್ತು ಮಾಡುವುದು.
  9. (ಭೂಮಿಯ) ಫಲವತ್ತನ್ನು ನಾಶಮಾಡುವುದು.
  10. ನಿತ್ರಾಣ; ನಿಶ್ಯಕ್ತಿ; ದಣಿವು; ಬಳಲಿಕೆ; ಶಕ್ತಿಗುಂದಿಕೆ.
  11. ವಿಕಲ್ಪಗಳನ್ನೆಲ್ಲಾ ಪರಿಹರಿಸುವ ಯಾ ತೊಡೆದು ಹಾಕುವ ಮೂಲಕ ನಿರ್ಣಯಕ್ಕೆ ಬರುವುದು.