exhaustible ಇ(ಎ)ಗ್‍ಸಾಸ್ಟ(ಸ್ಟಿ)ಬ್‍ಲ್‍
ಗುಣವಾಚಕ
  1. (ಗಾಳಿಯನ್ನು) ಹೊರತೆಗೆಯಬಲ್ಲ.
  2. ಪೂರ್ತಿಯಾಗಿ ಉಪಯೋಗಿಸಬಲ್ಲ; ಬಳಸಿ ಮುಗಿಸಿಬಿಡಬಲ್ಲ; ತೀರಿಸಿಬಿಡಲಾಗುವ
  3. (ಲೆಕ್ಕಹಾಕಿ) ಮುಗಿಸಬಲ್ಲ.
  4. (ಪಾತ್ರೆ) ಖಾಲಿ ಮಾಡಬಲ್ಲ; ಬರಿದುಮಾಡಬಲ್ಲ.
  5. (ವಿಷಯ ಕುರಿತು) ಹೇಳಿ ಮುಗಿಸಬಲ್ಲ.
  6. (ವಿಷಯ ಕುರಿತು) ಪೂರ್ತಿ ಕಂಡುಹಿಡಿಯಬಲ್ಲ; ಬುಡಮುಟ್ಟ ಶೋಧಿಸಿಬಿಡಬಲ್ಲ.
  7. (ವ್ಯಕ್ತಿ, ರಾಜ್ಯ, ಮೊದಲಾದವುಗಳ ವಿಷಯದಲ್ಲಿ) ಹೀರಿಹಾಕಬಲ್ಲ; ಬಸಿದುಬಿಡಬಲ್ಲ.
  8. ಬಳಲಿಸಲ್ಪಡಬಲ್ಲ; ದಣಿಸಲ್ಪಡಬಲ್ಲ; ಆಯಾಸ ಪಡಿಸಲ್ಪಡಬಲ್ಲ.
  9. (ಭೂಮಿಯ ವಿಷಯದಲ್ಲಿ) ಫಲವತ್ತು ನಾಶಮಾಡಲ್ಪಡಬಲ್ಲ.