exhale ಇ(ಎ)ಕ್ಸ್‍ಹೇಲ್‍, ಎಗ್‍ಸೇಲ್‍
ಸಕರ್ಮಕ ಕ್ರಿಯಾಪದ
  1. (ಹಬೆ ಮೊದಲಾದವನ್ನು) ಆವಿಯಾಗಿ ಹೊರಬಿಡು (ರೂಪಕವಾಗಿ ಸಹ): the engine exhaled steam ಎಂಜಿನು ಆವಿಯನ್ನು ಹೊರಕ್ಕೆ ಬಿಟ್ಟಿತು.
  2. (ಪ್ರಾಣಿದ್ರವಗಳು ಮೊದಲಾದವುಗಳ ವಿಷಯದಲ್ಲಿ) ಜಿನುಗು; ಒಸರು; ಸ್ರವಿಸು; ರಕ್ತನಾಳ ಮೊದಲಾದವುಗಳ ಮೂಲಕ ಸ್ವಲ್ಪಸ್ವಲ್ಪವಾಗಿ ಸೂಸು.
  3. (ಪ್ರಾಣ, ಆತ್ಮ, ಮಾತು, ಮೊದಲಾದವನ್ನು) ಉಸಿರು ಬಿಡು; ಹೊರಬಿಡು: to exhale a sigh ನಿಟ್ಟುಸಿರು ಬಿಡು.
  4. (ಕೋಪ ಮೊದಲಾದವನ್ನು ಸಿಡಿಯಬಿಟ್ಟಂತೆ) ಕಳೆ; ಕಳೆದುಬಿಡು; ಹೊರಡಿಸಿಬಿಡು; ಹೊರಗೆಡುಹು: I could not exhale my wrath before his grace ಆ ಮಹಿಮರ ದಯೆಯ ಮುಂದೆ ನಾನು ಕ್ರೋಧವನ್ನು ಹೊರಗೆಡಹಲಾಗಲಿಲ್ಲ.
ಅಕರ್ಮಕ ಕ್ರಿಯಾಪದ
  1. ಆವಿಯಾಗು; ಬಾಷ್ಪವಾಗು.
  2. ಉಸಿರು ಬಿಡು; ನಿಶ್ವಾಸಬಿಡು.