exert ಇ(ಎ)ಗ್‍ಸರ್ಟ್‍
ಸಕರ್ಮಕ ಕ್ರಿಯಾಪದ

(ಗುಣ, ಬಲ, ಪ್ರಭಾವ ಇವನ್ನು) ಉಪಯೋಗಿಸು; ಬಳಸು; ವಿನಿಯೋಗಿಸು; ಪ್ರಯೋಗಿಸು; ಬೀರು; ಪರಿಣಾಮಕಾರಿ ಮಾಡು: exert all one’s strength ತನ್ನ ಶಕ್ರಿಯನ್ನೆಲ್ಲಾ ಪ್ರಯೋಗಿಸು.

ಪದಗುಚ್ಛ

exert oneself (ಕೆಲಸ ಮಾಡಲು, ಒಂದು ಧ್ಯೇಯಕ್ಕಾಗಿ) ದುಡಿ; ಶ್ರಮಿಸು; ಪ್ರಯತ್ನಪಡು; ಪಾಡುಪಡು; ಒದ್ದಾಡು; ಪ್ರಯಾಸಪಡು; ಕಷ್ಟಪಟ್ಟು ಕೆಲಸಮಾಡು: if people are to exert themselves they must be convinced ಜನ ಶ್ರಮವಹಿಸಬೇಕಾದರೆ ಅವರ ಮನವೊಪ್ಪಿರಬೇಕು.