See also 2exempt  3exempt
1exempt ಇ(ಎ)ಗ್‍ಸೆಂಪ್ಟ್‍
ಗುಣವಾಚಕ
  1. (ತೆರಿಗೆ, ಹತೋಟಿ, ನ್ಯೂನತೆ, ಮೊದಲಾದವುಗಳಿಂದ) ವಿನಾಯಿತಿ ಪಡೆದ; ಹೊರತುಪಡಿಸಿದ; ವಿಮುಕ್ತವಾದ; ಬಿಡುಗಡೆ ಹೊಂದಿದ: persons exempt from taxes ತೆರಿಗೆಗಳಿಂದ ವಿನಾಯಿತಿ ಪಡೆದ ವ್ಯಕ್ತಿಗಳು.
  2. ಅಪಾಯ, ತೊಂದರೆ, ಮೊದಲಾದವುಗಳಿಗೆ — ಒಳಗಾಗದ, ಒಳಪಡದ.
See also 1exempt  3exempt
2exempt ಇ(ಎ)ಗ್‍ಸೆಂಪ್ಟ್‍
ನಾಮವಾಚಕ
  1. (ಮುಖ್ಯವಾಗಿ ತೆರಿಗೆಯಿಂದ) ವಿನಾಯಿತಿ ಪಡೆದವನು; ವಿಮುಕ್ತನಾದವನು.
  2. ಬ್ರಿಟನ್ನಿನ ದೊರೆಯ ಮೈಗಾವಲು ಪಡೆಯ ಮೇಲೆ ಕೆಲವು ಸಲ ಆಧಿಪತ್ಯ ನಡೆಸುವ ನಾಲ್ಕು ಅಧಿಕಾರಿಗಳ ಪೈಕಿ ಒಬ್ಬ.
See also 1exempt  2exempt
3exempt ಇ(ಎ)ಗ್‍ಸೆಂಪ್ಟ್‍
ಸಕರ್ಮಕ ಕ್ರಿಯಾಪದ

(ತೆರಿಗೆ, ಹೊಣೆ, ಮೊದಲಾದವುಗಳಿಂದ) ಬಿಡುತಿಕೊಡು; ವಿನಾಯಿತಿ ಕೊಡು; ಬಿಡುಗಡೆಮಾಡು: to exempt someone from military service or from an examination ಯಾರಾದರೊಬ್ಬರನ್ನು ಸೈನ್ಯ ಸೇವೆಯಿಂದ ಯಾ ಒಂದು ಪರೀಕ್ಷೆಯಿಂದ ವಿನಾಯಿತಿ ಮಾಡು.