exemplary ಇ(ಎ)ಗ್‍ಸೆಂಪ್ಲರಿ
ಗುಣವಾಚಕ
  1. ಆದರ್ಶಪ್ರಾಯ; ಅನುಕರಣೀಯ; ಮೇಲ್ಪಂಕ್ತಿಯಾದ; ಮಾದರಿಯಾದ: the exemplary lives of saints ಸಂತರ ಆದರ್ಶಪ್ರಾಯ ಜೀವನಗಳು.
  2. (ಪ್ರಾಚೀನ ಪ್ರಯೋಗ) ನಮೂನೆಯ; ಪಡಿಕಟ್ಟಿನ: the sentences read are exemplary of the style of the essay ಓದಿದ ವಾಕ್ಯಗಳು ಪ್ರಬಂಧದ ಶೈಲಿಯ ನಮೂನೆಯಾಗಿವೆ.
  3. ದೃಷ್ಟಾಂತವಾಗಿರುವ; ಉದಾಹರಣೆಯಾದ; ನಿದರ್ಶನ ಸ್ವರೂಪದ: exemplary passages ಉದಾಹರಣಾರೂಪದ (ಉದ್ಧೃತ) ಭಾಗಗಳು.
  4. ಎಚ್ಚರಿಕೆಯ; ಎಚ್ಚರಿಕೆಗಾಗಿ ನೀಡಿದ; ಎಚ್ಚರಿಕೆ ಕೊಡುವ.
ಪದಗುಚ್ಛ
  1. exemplary damages (ನ್ಯಾಯಶಾಸ್ತ್ರ) ಎಚ್ಚರಿಕೆ ದಂಡ; ಎಚ್ಚರಿಕೆ ಜುಲ್ಮಾನೆ; ಎಚ್ಚರಿಕೆ ನೀಡುವುದಕ್ಕಾಗಿ ವಿಧಿಸಿದ, ಸಾಮಾನ್ಯವಾದ ಪರಿಹಾರಕ್ಕಿಂತಲೂ ಹೆಚ್ಚಾಗಿರುವ ದಂಡ, ಜುಲ್ಮಾನೆ.
  2. exemplary punishment ಎಚ್ಚರಿಕೆಯ ಶಿಕ್ಷೆ; ಎಚ್ಚರಿಕೆಗಾಗಿ ನೀಡುವ ಹೆಚ್ಚಿನ ಶಿಕ್ಷೆ.