execution ಎಕ್ಸಿಕ್ಯೂಷನ್‍
ನಾಮವಾಚಕ
  1. ನಡೆಸುವುದು; ನೆರವೇರಿಸುವುದು; ನೆರವೇರಿಕೆ; ನಿರ್ವಾಹ; ನಿರ್ವಹಣೆ; ಸಾಧನೆ; ಆಚರಣೆ; ಆಗಮಾಡಿಕೆ; ಜಾರಿಗೆ ತರುವಿಕೆ; ಕಾರ್ಯರೂಪಕ್ಕೆ ತರುವಿಕೆ: put a new plan into execution ಒಂದು ಹೊಸ ಯೋಜನೆಯನ್ನು ಜಾರಿಗೆ ತರು.
  2. ಸಂಗೀತ ಕೌಶಲ; ಗಾನಕೌಶಲ ಯಾ ವಾದನ ಕೌಶಲ; ಸಂಗೀತದಲ್ಲಿ ಜಾಣ್ಮೆ; ಸಂಗೀತ ಹಾಡುವುದರಲ್ಲಿ, ನುಡಿಸುವುದರಲ್ಲಿ ಚಮತ್ಕಾರ: execution of a violin solo ಪಿಟೀಲು ತನಿಯ ಚಮತ್ಕಾರ.
  3. (ಸಾಲ ತೀರಿಸಲು ತಪ್ಪಿದಾಗ ಆಸ್ತಿಯನ್ನಾಗಲಿ ಸಾಲಗಾರರನನ್ನಾಗಲಿ) ಸ್ವಾಧೀನ ಪಡೆಯುವುದು; ಜಫ್ತಿ, ದಸ್ತಗಿರಿ ಮಾಡುವುದು.
  4. ಗಲ್ಲಿಗೆ ಹಾಕುವುದು; ಫಾಸಿ ಶಿಕ್ಷೆ ಕೊಡುವುದು; ಮರಣದಂಡನೆ ವಿಧಿಸುವುದು.
ಪದಗುಚ್ಛ

Execution Dock (ಚರಿತ್ರೆ) ಗಲ್ಲುಕಟ್ಟೆ; ನೇಣುಕಟ್ಟೆ; (ವ್ಯಾಪಿಂಗ್‍ ಹತ್ತಿರ) ಥೇಮ್ಸ್‍ ನದಿಯ ದಡದ ಮೇಲೆ ಕಡಲುಗಳ್ಳರನ್ನು ಹಿಂದೆ ಗಲ್ಲಿಗೇರಿಸುತ್ತಿದ್ದ ಸ್ಥಳ.

ನುಡಿಗಟ್ಟು

do execution (ಆಯುಧದ ವಿಷಯದಲ್ಲಿಮತ್ತು ವಾದ ಮೊದಲಾದವುಗಳ ವಿಷಯದಲ್ಲಿರೂಪಕವಾಗಿವಾಗಿ) ನಾಶಕಾರಿಯಾಗಿರು; ನಾಶಮಾಡು; ಧ್ವಂಸಗೊಳಿಸು: the grenades did rapid execution ಸಿಡಿಗುಂಡುಗಳು ಕ್ಷಿಪ್ರವಾಗಿ ಧ್ವಂಸಮಾಡಿದವು.