execute ಎಕ್ಸಿಕ್ಯೂಟ್‍
ಸಕರ್ಮಕ ಕ್ರಿಯಾಪದ
  1. (ಯೋಜನೆ, ಆಜ್ಞೆ, ಕಾಯಿದೆ, ನ್ಯಾಯಾಧೀಶನ ತೀರ್ಪು, ಉಯಿಲು — ಇವನ್ನು) ನಡಸು; ಆಗಮಾಡು; ನೆರವೇರಿಸು; ಕಾರ್ಯರೂಪಕ್ಕೆ ತರು; ಕಾರ್ಯಗತಗೊಳಿಸು; ಕಾರ್ಯಗತ ಮಾಡು; ಜಾರಿಗೆ ತರು: execute a purpose ಉದ್ದೇಶವನ್ನು ನೆರವೇರಿಸು. execute the provisions of a will ಉಯಿಲಿನ ನಿಬಂಧನೆಗಳನ್ನು ಜಾರಿಗೆ ತರು.
  2. (ಕಲೆಯ ಯಾ ಕುಶಲಕೃತಿಯ) ನಕ್ಷೆಯನ್ನು ಕಾರ್ಯರೂಪಕ್ಕೆ ತರು; ಮೂಲ ಮಾದರಿಯಂತೆ ರಚಿಸು; ಮೂಲ ಮಾದರಿಗನುಸಾರವಾಗಿ ನಿರ್ಮಿಸು: to execute a statue ಪ್ರತಿಮೆಯನ್ನು ರಚಿಸು.
  3. (ಕ್ರಿಯೆ, ಕಾರ್ಯಾಚರಣೆ, ಮೊದಲಾದವುಗಳನ್ನು) ಮಾಡು; ನಡಸು; ಸಾಧಿಸು: to execute a gymnastic feat ಕಸರತ್ತಿನ ಸಾಹಸ ಮಾಡಲು.
  4. (ಕಾನೂನನ್ನು ಅನುಸರಿಸಿ ಬರೆದ ದಸ್ತೈವಜನ್ನು, ಸಹಿಮಾಡಿ, ಮುದ್ರೆಯೊತ್ತಿ, ಇತರ ನಿಯಮಗಳನ್ನು ಅನುಸರಿಸಿ) ಅಧಿಕೃತಗೊಳಿಸು; ಸಪ್ರಮಾಣಗೊಳಿಸು.
  5. (ಅಧಿಕಾರವನ್ನು, ಕರ್ತವ್ಯವನ್ನು) ಸಲ್ಲಿಸು; ನೆರವೇರಿಸು; ನಡೆಸು; ನಿರ್ವಹಿಸು.
  6. (ಸಂಗೀತಕೃತಿಯನ್ನು) ಹಾಡು ಯಾ ಬಾಜಿಸು, ಬಾರಿಸು: execute a piece of music ಒಂದು ಕೃತಿಯನ್ನು ಹಾಡು.
  7. (ರಂಗದ ಮೇಲೆ ನಾಟಕ, ನಾಟ್ಯವನ್ನು) ಅಭಿನಯಿಸು.
  8. ಮರಣದಂಡನೆ ವಿಧಿಸು; ಗಲ್ಲಿಗೇರಿಸು; ಹಾಸಿಗೆ ಹಾಕು: executed him as a traitor ದೇಶದ್ರೋಹಿಯೆಂದು ಅವನನ್ನು ಗಲ್ಲಿಗೇರಿಸಲಾಯಿತು.