excursion ಇ(ಎ)ಕ್ಸ್‍ಕರ್ಷನ್‍
ನಾಮವಾಚಕ
  1. (ಹೊರಟ ಜಾಗಕ್ಕೆ ಹಿಂಬರುವ ಉದ್ದೇಶದಿಂದ ಕೈಗೊಂಡ) ಪ್ರಯಾಣ; ತಿರುಗಾಟ; ಸಂಚಾರ; ವಿಹಾರ; ಸುತ್ತಾಟ (ರೂಪಕವಾಗಿ ಸಹ).
  2. (ಕೆಲವು ಮಂದಿ ಸೇರಿ ಹೊರಡುವ) ಸಂತೋಷ ಪ್ರವಾಸ; ಆನಂದ ವಿಹಾರ; ವಿನೋದ ವಿಹಾರ: Sunday excursions to the city ಪಟ್ಟಣಕ್ಕೆ ಭಾನುವಾರದ ಪ್ರವಾಸಗಳು.
  3. (ಪ್ರಾಚೀನ ಪ್ರಯೋಗ) ದಾಳಿ; ಹೊರದಾಳಿ; ಮುತ್ತಿಗೆ ಹಾಕಿದವನ ಮೇಲೆ ಮಾಡುವ ಹಠಾತ್‍ ದಾಳಿ.
  4. (ಖಗೋಳ ವಿಜ್ಞಾನ) ಪಥಚ್ಯುತಿ; ವಿಪಥನ; ರೂಢಿಯ ಪಥ ಬಿಟ್ಟು ಹೋಗುವುದು.
  5. ಪ್ರಸಂಗಾಂತರ; ವಿಷಯಾಂತರ.
ಪದಗುಚ್ಛ

alarms and excursions

  1. (ರಂಗನಿರ್ದೇಶನದಲ್ಲಿ) (ಕಾಳಗವನ್ನು ಪ್ರದರ್ಶಿಸಲು ಅಭಿನಯಿಸುವ) ಸಡಗರದ ಓಡಾಟ.
  2. (ಹಾಸ್ಯ ಪ್ರಯೋಗ) ಸಣ್ಣಪುಟ್ಟ ಕಾದಾಟ, ಜಗಳ.
  3. (ಹಾಸ್ಯ ಪ್ರಯೋಗ) (ನಿಷ್ಕಾರಣವಾದ) ಸಡಗರ; ಸಂಭ್ರಮ; ಗಡಿಬಿಡಿ; ಓಡಾಟ.