excruciate ಇ(ಎ)ಕ್ಸ್‍ಕ್ರೂಷಿಏಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಕೃದಂತರೂಪದಲ್ಲಿ ವಿಶೇಷಣವಾಗಿ) (ವ್ಯಕ್ತಿಯ ಇಂದ್ರಿಯಗಳಿಗೆ) ಅತಿ ಯಾತನೆಕೊಡು; ಅತಿ ವೇದನೆಪಡಿಸು; ಯಮಯಾತನೆಪಡಿಸು; ಬಹಳ ನೋವುಂಟುಮಾಡು: a man excruciated by facial neuralgia ಮುಖದ ನರಶೂಲೆಯಿಂದ ಯಮಯಾತನೆಪಟ್ಟ ಮನುಷ್ಯ.
  2. (ವಿರಳ ಪ್ರಯೋಗ) ಮನಸ್ಸಿಗೆ ಯಾತನೆಯುಂಟುಮಾಡು, ಬಾಧೆಪಡಿಸು: the very sound of his voice excruciates ಅವನ ಧ್ವನಿಯ ಸದ್ದೇ ನನ್ನ ಮನಸ್ಸಿಗೆ ಯಾತನೆಯುಂಟುಮಾಡುತ್ತದೆ.