See also 2exclusive
1exclusive ಇ(ಎ)ಕ್ಸ್‍ಕ್ಲೂಸಿವ್‍
ಗುಣವಾಚಕ
  1. ಹೊರಗಿಡುವ; ಹೊರಚ್ಚುಮಾಡುವ; ಬಹಿಷ್ಕರಿಸುವ; ಬಹಿಷ್ಕಾರಕ.
  2. (ಸಮಾಜದ ಉನ್ನತ ವಲಯಗಳ ವಿಷಯದಲ್ಲಿ) ಆಯ್ದ; (ಇತರರಿಗೆ) ಎಡೆಗೊಡದ, ಆಸ್ಪದವೀಯದ; (ಇತರರನ್ನು) ಹೊರಗಿಡಲು ಬಯಸುವ; ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಹಿಂದೆಗೆಯುವ; ಪ್ರತ್ಯೇಕತೆ ಬಯಸುವ.
  3. (ಅಂಗಡಿ ಪದಾರ್ಥದ ವಿಷಯದಲ್ಲಿ) ಬೇರೆಲ್ಲೂ ಸಿಕ್ಕದ; ಇನ್ನೆಲ್ಲೂ ದೊರೆಯದ; ಲಭ್ಯವಾಗದ.
  4. (ವೃತ್ತಪತ್ರಿಕೆಯ ಲೇಖನದ ವಿಷಯದಲ್ಲಿ) ಬೇರೆಲ್ಲೂ ಪ್ರಕಟವಾಗದ.
  5. (ತರ್ಕಶಾಸ್ತ್ರ) (ಪದಗಳು ಮೊದಲಾದವುಗಳ ವಿಷಯದಲ್ಲಿ) ವ್ಯಾವರ್ತಕ; (ಗೊತ್ತುಪಡಿಸಿದವು ಹೊರತು) ಉಳಿದುದನ್ನೆಲ್ಲ ಹೊರಹಾಕುವ; ಉಳಿದವಕ್ಕೆ ವ್ಯಾಪಿಸದ: exclusive proposition ವ್ಯಾವರ್ತಕ ಪ್ರತಿಜ್ಞೆ.
  6. ಏಕೈಕ; ಏಕಮಾತ್ರ; ಏಕನಿಷ್ಠ; (ಉಳಿದೆಲ್ಲವನ್ನೂ ಬಿಟ್ಟು) ಒಂದರಲ್ಲಿ ಮಾತ್ರ — ತೊಡಗಿರುವ, ನಿಯುಕ್ತವಾಗಿರುವ, ಉದ್ಯುಕ್ತವಾಗಿರುವ, ನಿರತರಾಗಿರುವ; (ಒಂದನ್ನು) ಅನುಸರಿಸುತ್ತಿರುವ: his exclusive occupation ಅವನ ಏಕೈಕ ವೃತ್ತಿ.
  7. ಉತ್ತಮ ದರ್ಜೆಯ; ಬೆಲೆಬಾಳುವ.
ನುಡಿಗಟ್ಟು

exclusive of (ಒಂದನ್ನೂ) ಎಣಿಸದೆ; ಲೆಕ್ಕಿಸದೆ; ಸೇರಿಸದೆ: 20 men exclusive of our own ನಮ್ಮ ಕಡೆಯವರನ್ನು ಎಣಿಸದೆ ಬಿಟ್ಟರೆ, 20 ಮಂದಿ.

See also 1exclusive
2exclusive ಇ(ಎ)ಕ್ಸ್‍ಕ್ಲೂಸಿವ್‍
ನಾಮವಾಚಕ

(ಬೇರೆ ಯಾವುದರಲ್ಲೂ ಪ್ರಕಟವಾಗದೆ) ಒಂದೇ ಒಂದು ವೃತ್ತಪತ್ರಿಕೆ ಯಾ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇನ ಮೊದಲಾದವು.