exclude ಇ(ಎ)ಕ್ಸ್‍ಕ್ಲೂಡ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು ಯಾ ವಸ್ತುವನ್ನು ಒಂದು ಸ್ಥಳ, ಸಮಾಜ, ಹಕ್ಕು, ಮೊದಲಾದವುಗಳಿಂದ) ಹೊರಗಿಡು; ಹೊರಚ್ಚು ಮಾಡು, ಬಹಿಷ್ಕರಿಸು.
  2. (ಸಂದೇಹ ಮೊದಲಾದವನ್ನು) ತಡೆ; ಹುಟ್ಟದಂತೆ ಮಾಡು; ಅಸಾಧ್ಯಗೊಳಿಸು.
  3. ಹೊರಹಾಕಿ ಸೇರಿಸದಿರು; ಹೊರದೂಡಿ, ಹೊರಗೇ — ಇಡು.
  4. ಅಸಂಬದ್ಧವೆಂದು ಅಲಕ್ಷಿಸು; ಅನಪೇಕ್ಷಿತವೆಂದು ತಳ್ಳಿಹಾಕು; ಬೇಕಾಗಿಲ್ಲವೆಂದು ಕಡೆಗಣಿಸು.
ಪದಗುಚ್ಛ

excluded middle (ತರ್ಕಶಾಸ್ತ್ರ) ಬಹಿಷ್ಕೃತ ಮಧ್ಯಮ ಸೂತ್ರ; ನಿಷಿದ್ಧ ಮಧ್ಯಸ್ಥತೆ; ಪ್ರತಿಜ್ಞಾವಾಕ್ಯ ಮತ್ತು ಅದರ ನಿಷೇಧ ಇವೆರಡರಲ್ಲಿ ಒಂದು ಮಾತ್ರವೇ ಸತ್ಯವಾಗಿರಬಲ್ಲದು, ಇವೆರಡನ್ನುಳಿದ ಮೂರನೆಯ ಮಧ್ಯಸ್ಥ ಸ್ಥಿತಿ ಎನ್ನುವುದೊಂದಿಲ್ಲ ಎಂಬ ಸೂತ್ರ, ತತ್ತ್ವ.