exclaim ಇ(ಎ)ಕ್ಸ್‍ಕ್ಲೇಮ್‍
ಸಕರ್ಮಕ ಕ್ರಿಯಾಪದ

(ಯಾವುದೇ ಉದ್ಗಾರದ ಮಾತನ್ನು) ಉದ್ಗರಿಸು; ಗಟ್ಟಿಯಾಗಿ ಹೇಳು.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ನೋವು, ಕೋಪ, ಮೊದಲಾದವುಗಳಿಂದ) ಕೂಗಿಕೊ; ಚೀರು; ಒದರು; ಉದ್ಗಾರ ತೆಗೆ.

ಪದಗುಚ್ಛ

exclaim against (ಪ್ರಾಚೀನ ಪ್ರಯೋಗ) ಗಟ್ಟಿಯಾಗಿ ಒಬ್ಬರ ವಿರೋಧವಾಗಿ ಕೂಗಾಡು; ಜೋರಾಗಿ ಒಬ್ಬರನ್ನು ಪ್ರತಿಭಟಿಸು; ಗಟ್ಟಿಯಾಗಿ ಖಂಡಿಸು, ನಿಂದಿಸು.